ಮೈಸೂರು: ಕೋವಿಡ್ ಮುಕ್ತವಾಗಲಿ ಎಂದು ಜನರ ಕೋರಿಕೆ ಮೇರೆಗೆ ವರಮಹಾಲಕ್ಷ್ಮಿ ದೇವಿಗೆ ವಿಶೇಷವಾಗಿ ಲಕ್ಷಾಂತರರೂ. ವೆಚ್ಚ ಮಾಡಿ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ನಗರದ ದೇವರಾಜ ಅರಸು ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ವರಮಹಾಲಕ್ಷ್ಮಿ ದೇವಿಯನ್ನು ಪ್ರತಿಷ್ಟಾಪನೆ ಮಾಡಲಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ನೋಟುಗಳಿಂದ ಶೃಂಗಾರಗೊಂಡ ವರಮಹಾಲಕ್ಷ್ಮಿಗೆ ವಿಶೇಷ ಪೂಜೆ ವಿಶೇಷವೆಂದರೆ ವರಮಹಾಲಕ್ಷ್ಮಿ ದೇವಿಗೆ 1 ರೂ. ಯಿಂದ ಹಿಡಿದು 5 , 10, 20, 50, 100, 500 ಹಾಗೂ 2,000 ರೂಪಾಯಿಗಳ ನೋಟುಗಳಿಂದಲೇ ಅಂದರೆ ಒಟ್ಟು ಸುಮಾರು 2 ಲಕ್ಷ ರೂಪಾಯಿಗಳ ನೋಟುಗಳಿಂದ ಅಲಂಕಾರ ಮಾಡಲಾಗಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ; ನಾಡಿನ ಒಳಿತಿಗೆ ನಾರಿಯರ ಪ್ರಾರ್ಥನೆ
ಶ್ರಾವಣ ಮಾಸದ ಹುಣ್ಣಿಮೆ ನಂತರ ಬರುವ ಮೊದಲ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇಷ್ಟಾರ್ಥ ಸಿದ್ದಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶೇಷವಾಗಿ ಕೊರೊನಾ ಮಹಾಮಾರಿ ದೂರವಾಗಲಿ, ಶಾಂತಿ ನೆಮ್ಮದಿ ನೆಲೆಸಲಿ ಎಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ವಿಶೇಷವಾಗಿ ಹಣದಿಂದಲೇ ಅಲಂಕಾರ ಮಾಡಿ ಆಚರಿಸಲಾಗುತ್ತಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಪ್ರವೀಣ್ ಈಟಿವಿ ಭಾರತಗೆ ತಿಳಿಸಿದ್ದಾರೆ.