ಮೈಸೂರು:ನವರಾತ್ರಿ ವೈಭವದಲ್ಲಿ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ನಿತ್ಯವೂ ಒಂದೊಂದು ವಿಶಿಷ್ಟ ಅಲಂಕಾರ ಮಾಡಲಾಗುತ್ತದೆ. ಸರ್ವಾಲಂಕಾರ ಭೂಷಿತಳಾಗಿ ಭಕ್ತರಿಗೆ ದರ್ಶನ ನೀಡುವ ತಾಯಿಯ ನವ ದಿನದ ಅಲಂಕಾರದ ಮಾಹಿತಿ ಇಲ್ಲಿದೆ ನೋಡಿ.
ನವರಾತ್ರಿಯಲ್ಲಿ ವಿಶೇಷ ಅಲಂಕೃತಳಾಗುವ ಚಾಮುಂಡೇಶ್ವರಿ: ನವ ದುರ್ಗೆಯ ನವ ವೈಭವ - ಮೈಸೂರು ದಸರಾ ಚಾಮುಂಡೇಶ್ವರಿ ದೇವಿ ಅಲಂಕಾರ
ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಉತ್ಸವ ಹಾಗೂ ವಿಶೇಷ ಪೂಜೆಗಳು ಜರುಗುತ್ತವೆ. ನಿತ್ಯ ಅಮ್ಮನವರಿಗೆ ಜರುಗುವ ವಿಶೇಷ ಅಲಂಕಾರದ ಮಾಹಿತಿ ಮತ್ತು ಅವತಾರದ ವಿವರಗಳು ಈ ರೀತಿಯಲ್ಲಿವೆ.
ಚಾಮುಂಡೇಶ್ವರಿ ದೇವಿ
ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಉತ್ಸವ ಹಾಗೂ ವಿಶೇಷ ಪೂಜೆಗಳು ಜರುಗುತ್ತವೆ. ಈ ಶುಭದಿನದಲ್ಲಿ ತಾಯಿ ಚಾಮುಂಡೇಶ್ವರಿಯನ್ನು 9 ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಎಂದು ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ವಿವರಿಸಿದರು.
9 ದಿನಗಳ 9 ಅಲಂಕಾರಗಳು
- ಅಕ್ಟೋಬರ್ 17 - ಬ್ರಾಹ್ಮೀ ಅಲಂಕಾರ
- ಅಕ್ಟೋಬರ್ 18 - ಮಹೇಶ್ವರಿ ಅಲಂಕಾರ
- ಅಕ್ಟೋಬರ್ 19 - ಕೌಮಾರಿ ಅಲಂಕಾರ
- ಅಕ್ಟೋಬರ್ 20 - ವೈಷ್ಣವಿ ಅಲಂಕಾರ
- ಅಕ್ಟೋಬರ್ 21 - ವಾರಾಹಿ ಅಲಂಕಾರ
- ಅಕ್ಟೋಬರ್ 22 - ಇಂದ್ರಾಣಿ ಅಲಂಕಾರ
- ಅಕ್ಟೋಬರ್ 23 - ಚಾಮುಂಡಿ ಅಲಂಕಾರ (ಸಂಜೆ ಕಾಳರಾತ್ರಿ ಪೂಜೆ)
- ಅಕ್ಟೋಬರ್ 24 - ಸರಸ್ವತಿ ಅಲಂಕಾರ
- ಅಕ್ಟೋಬರ್ 25 - ಗಜಲಕ್ಷ್ಮಿ ಅಲಂಕಾರ
- ಅಕ್ಟೋಬರ್ 26 - ಅಶ್ವಾರೋಹಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.