ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ವಿಭಾಗ ಕ್ರಮ ಕೈಗೊಂಡಿದ್ದು, 16 ರೈಲುಗಳ ಸೇವೆಯನ್ನು ರದ್ದುಗೊಳಿಸಿ ಪ್ರಕಟಣೆ ಹೊರಡಿಸಿದೆ.
ಕೊರೊನಾ ಕಾವು: ನೈರುತ್ಯ ರೈಲ್ವೆ ವಲಯದ 16 ರೈಲುಗಳ ಸೇವೆ ರದ್ದು
ರಾಜ್ಯಕ್ಕೆ ಕೊರೊನಾ ದಾಂಗುಡಿ ಇಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನೈರುತ್ಯ ರೈಲ್ವೆ ವಿಭಾಗ ತನ್ನ 16 ರೈಲುಗಳ ಸೇವೆಯನ್ನು ರದ್ದುಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ನೈರುತ್ಯ ರೈಲ್ವೆ ವಲಯ
ಮೈಸೂರು ಮತ್ತು ಬೆಂಗಳೂರು ನಡುವೆ ಪ್ರತಿನಿತ್ಯ ಸಂಚರಿಸುವ 3 ರೈಲು, ವಾರಾಂತ್ಯದಲ್ಲಿ ಸಂಚರಿಸುವ 2 ರೈಲು, ಶಿವಮೊಗ್ಗ - ಯಶವಂತಪುರ, ಯಶವಂತಪುರ - ಮಂಗಳೂರು, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುವ ಜನ ಶತಾಬ್ಧಿ ಸೇರಿದಂತೆ ಪ್ರಮುಖ 16 ರೈಲುಗಳ ಸೇವೆಯನ್ನು ನಾಳೆಯಿಂದ 31-03-2020ರವರಗೆ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.