ಕರ್ನಾಟಕ

karnataka

ETV Bharat / city

ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ: 25 ಸಾವಿರ ರೂಪಾಯಿ ದಂಡ - mysore news

ತಮಗೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಒಂದೇ ಗ್ರಾಮದ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.

Social exclusion for 12 family in mysore
Social exclusion for 12 family in mysore

By

Published : Oct 26, 2021, 11:05 PM IST

ಮೈಸೂರು:ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ನಡೆದಿದೆ.

ತಮಗಾದ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯೆಯ ಕುಟುಂಬಕ್ಕೂ ಸೇರಿ‌ 12 ಕುಟುಂಬಗಳಿಗೆ ಸಾಮೂಹಿಕವಾಗಿ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೊಳಗಾಗಿರುವ ಕುಟುಂಬ ಸದಸ್ಯರನ್ನು ಯಾರು ಮಾತನಾಡಿಸುವಂತಿಲ್ಲ. ಶುಭ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ನೆರವು ನೀಡುವಂತಿಲ್ಲ.

ನ್ಯಾಯ ಕೇಳಿದ್ದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ

ಇದನ್ನೂ ಓದಿರಿ:ಆಪ್ತ ಸ್ನೇಹಿತರಿಂದ ಹಣ ವಂಚನೆ ಆರೋಪ: ಠಾಣೆಗೆ ಹಾಜರಾದ ಸಂಜನಾ ಗಲ್ರಾನಿ

25ಸಾವಿರ ರೂ. ದಂಡ

ಸಾಮಾಜಿಕವಾಗಿ ಬಹಿಷ್ಕಾರಕ್ಕೊಳಗಾದ ಕುಟುಂಬವೊಂದು ವಿವಾಹವೊಂದರಲ್ಲಿ ಭಾಗಿಯಾಗಿದ್ದಕ್ಕಾಗಿ 25 ಸಾವಿರ ರೂ. ದಂಡ ಹಾಕಲಾಗಿದೆ. ಈ ಕುರಿತು ಬಹಿಷ್ಕಾರಕ್ಕೊಳಗಾಗಿರುವ ರಾಘವೇಂದ್ರ ಸೇರಿದಂತೆ ಇತರರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು ನೀಡಿದ್ದೇವೆ‌. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇಷ್ಟಾದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ನಮಗೆ ನ್ಯಾಯಕೊಡಿ, ನಮ್ಮನ್ನ ಬಹಿಷ್ಕಾರದಿಂದ ಮುಕ್ತಗೊಳಿಸಿ ಎಂಬುದು ಅವರ ಅಳಲಾಗಿದೆ‌.

ABOUT THE AUTHOR

...view details