ಮೈಸೂರು: ಇಲ್ಲಿನರಾಮಕೃಷ್ಣ ನಗರದಲ್ಲಿರುವ ನಟ ಮಂಡ್ಯ ರಮೇಶ್ ಅವರ ರಂಗಭೂಮಿ ಗ್ರಂಥಾಲಯದಲ್ಲಿ ತೋಳದ ಹಾವಿನ ಮರಿ ಪತ್ತೆಯಾಗಿದೆ.
ನಟ ಮಂಡ್ಯ ರಮೇಶ್ ಕಚೇರಿಗೆ ನುಗ್ಗಿದ ತೋಳದ ಹಾವಿನ ಮರಿ ಹಾವಿನ ಮರಿ ಕಂಡ ಮಂಡ್ಯ ರಮೇಶ್ ಕೂಡಲೇ ಉರಗ ರಕ್ಷಕ ಸ್ನೇಕ್ ಸೂರ್ಯಕೀರ್ತಿ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ, ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಬಳಿಕ ಇದು ವಿಷಕಾರಿಯಲ್ಲ ಮುಟ್ಟಿ ಎಂದು ರಮೇಶ್ ಅವರಿಗೆ ಹೇಳಿದಾಗ, ಈ ಹಾವಿನ ಸಹವಾಸವೇ ಬೇಡ ಎಂದು ಅವರು ಹಿಂಜರಿದರು. ಕೊನೆಗೆ ಧೈರ್ಯ ಹೇಳಿದ ಸೂರ್ಯಕೀರ್ತೀ, ಹಾವನ್ನು ರಮೇಶ್ ಕೈಗಿಟ್ಟಿದ್ದಾರೆ.
ಓದಿ:ದಾವಣಗೆರೆಯಲ್ಲಿ ಕೊರೊನಾ ಕೇರ್ ಸೆಂಟರ್ಗೆ ಒತ್ತು.. ಸೋಂಕು ಲಕ್ಷಣ ಇಲ್ಲದವರಿಗೂ ಸೂಕ್ತ ಚಿಕಿತ್ಸೆ