ಕರ್ನಾಟಕ

karnataka

ETV Bharat / city

ನಕಲಿ‌ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ.ಮೌಲ್ಯದ ಜಮೀನು ಮಾರಾಟ: 6 ಮಂದಿ ಬಂಧನ - ಮೈಸೂರಿನ ಅಶೋಕಪುರಂ ಪೊಲೀಸರು

ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ಮಾರಾಟ ಮಾಡಿ ಹಣ ಪಡೆದ 6 ಮಂದಿಯನ್ನು ಮೈಸೂರಿನ ಅಶೋಕಪುರಂ ಪೊಲೀಸರು ಬಂಧಿಸಿದ್ದಾರೆ.

ಬಂಧನ
arrest

By

Published : Jul 9, 2021, 7:33 PM IST

ಮೈಸೂರು: ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್​ನಲ್ಲಿ ಸಾಲ ಪಡೆದು ಮತ್ತೆ ಅದೇ ಜಮೀನಿನ ಮತ್ತೊಂದು ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನೇ ಮಾರಾಟ ಮಾಡಿದ 6 ಮಂದಿ ವಂಚಕರನ್ನು ನಗರದ ಅಶೋಕಪುರಂ ಪೊಲೀಸರು ಬಂಧಿಸಿದ್ದಾರೆ‌.

ಏನಿದು ಪ್ರಕರಣ: ನಗರದ ಶ್ರೀ ರಾಂಪುರ ಬಡಾವಣೆಯ ಶ್ಯಾಮಲಾ ಹಾಗೂ ದಿವಂಗತ ಇಂದ್ರಮ್ಮ ಅವರ 4 ಎಕರೆ 36 ಗುಂಟೆ ಜಮೀನಿನ ಸರ್ವೇ ನಂಬರ್- 102/1 A ಜಮೀನನ್ನು ಮಹೇಶ್ ಎಂಬುವರು GPA ಮಾಡಿಸಿಕೊಂಡಿದ್ದು, ಈ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ಮಹೇಶ್ ಅವರಿಂದ ದಾಖಲೆಗಳನ್ನು ಮಾಹಾಲಿಂಗ ಎಂಬ ವ್ಯಕ್ತಿ ಪಡೆದಿದ್ದಾನೆ. ದಾಖಲೆಗಳನ್ನು ಮಾಹಾಲಿಂಗ ತನ್ನ ಸ್ನೇಹಿತರಾದ ಮಂಜು ಮತ್ತು ಯೋಗೇಶ್ ಅವರಿಗೆ ನೀಡಿದ್ದು, ಈ ಸಂದರ್ಭದಲ್ಲಿ ಮಾಹಾಲಿಂಗ ಮತ್ತು ಯೋಗೇಶ್ ಜಮೀನನ್ನು ಲಪಟಾಯಿಸಲು ಕುತಂತ್ರ ರೂಪಿಸಿದ್ದಾರೆ.

ಮೂಲ ಜಮೀನಿನ ಮಾಲೀಕರಾದ ಶ್ಯಾಮಲಾ ಹಾಗೂ ಇಂದ್ರಮ್ಮ ಹೆಸರಿನ ಬದಲು ರಾಜೇಶ್ವರಿ ಹಾಗೂ ಭಾಗ್ಯ ಎಂದು ಬದಲಾಯಿಸಿ ನಕಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ನಕಲಿ ದಾಖಲೆಗಳನ್ನು ಮಾಡಿಸಿಕೊಂಡು ಈ ದಾಖಲಾತಿಗೆ ಮಂಜು ಎಂಬ ವ್ಯಕ್ತಿಯ ನಕಲಿ ಸಹಿ ಮಾಡಿಸಿ, ಬೇರೊಬ್ಬನಿಗೆ ಈ ಜಮೀನನ್ನು ಮಾರಾಟ ಮಾಡಿದ್ದಾರೆ. ಮಹೇಶ್ ಅವರು GPA ಮಾಡಿಸಿಕೊಂಡು ಮಾರಾಟಕ್ಕೆ ಇಟ್ಟಿದ್ದ 4 ಎಕರೆ ಜಮೀನನ್ನು ಭಾಗ್ಯಮ್ಮ ಎಂಬ ಮಹಿಳೆಗೆ ಇಂದ್ರಮ್ಮ ಹೆಸರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ,‌ ಆಂಧ್ರಪ್ರದೇಶದ ನಲ್ಲೂರು SBI ಶಾಖೆಯಲ್ಲಿ ವಸುಮತಮ್ಮ ಹಾಗೂ ಕಾಶೀರೆಡ್ಡಿ ವೇದಾವತಿಗೆ ತಲಾ 2 ಕೋಟಿ ರೂ. ಸಾಲ ಕೊಡಿಸಿದ್ದು, ಒಂದೇ ಜಮೀನಿನ ನಕಲಿ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಜಮೀನಿನ GPA ಮಾಲೀಕ ಮಹೇಶ್ ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು ರಾಜೇಶ್ವರಿ( ನಕಲಿ ಶ್ಯಾಮಲಾ), ಭಾಗ್ಯ ( ನಕಲಿ ಇಂದ್ರಮ್ಮ) ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಹಾಲಿಂಗ, ಯೋಗೇಶ್ ಹಾಗೂ ಮಂಜು ಎಂಬುವರನ್ನು ಮೈಸೂರಿನಲ್ಲಿ ಪೊಲೀಸರು‌ ಬಂಧಿಸಿದ್ದಾರೆ. ಆಂಧ್ರಪ್ರದೇಶದ ನಲ್ಲೂರಿನಲ್ಲಿ ಕಾಶೀರೆಡ್ಡಿ ವೇದಾವತಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ABOUT THE AUTHOR

...view details