ಕರ್ನಾಟಕ

karnataka

ETV Bharat / city

ಮಂಗಳೂರು ಬಾಂಬ್ ಪ್ರಕರಣದಲ್ಲಿ ಶರಣಾಗತಿಯಾದ ವ್ಯಕ್ತಿ ಬಗ್ಗೆ ಗೊತ್ತಿಲ್ಲ: ಸಿದ್ದರಾಮಯ್ಯ - manglore bomb blost accused arrest news

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಶರಣಾಗಿದ್ದು ಆತನ ವಿಚಾರ ನನಗೆ ಗೊತ್ತಿಲ್ಲ, ಈ ಕುರಿತು ತನಿಖೆ ನಡೆಯಲಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Siddaramayya reaction about manglore bomb blost accused
ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ

By

Published : Jan 22, 2020, 1:18 PM IST

ಮೈಸೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಶರಣಾಗಿದ್ದು ಆತನ ವಿಚಾರ ನನಗೆ ಗೊತ್ತಿಲ್ಲ, ಈ ಕುರಿತು ತನಿಖೆ ನಡೆಯಲಿ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ

ಇಂದು ತಮ್ಮ ಸ್ವಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಇರುವ ಸಂದರ್ಭದಲ್ಲಿ ಬ್ಯಾಂಕ್​ಗಳು ನೋಟಿಸ್ ಕೊಟ್ಟು ರೈತರ ಟ್ರ್ಯಾಕ್ಟರ್ ಅನ್ನು ಜಪ್ತಿ ಮಾಡುವುದು ಸರಿಯಲ್ಲ, ಮೈಸೂರು ವಿವಿಯ ಪ್ರತಿಭಟನೆಯ ಸಂದರ್ಭದಲ್ಲಿ ಫ್ರೀ ಕಾಶ್ಮೀರ ನಾಮ‌ಫಲಕ ಹಿಡಿದ ಯುವತಿಯ ಪರ ವಕಾಲತ್ತು ವಹಿಸದಂತೆ ಮೈಸೂರಿನ ಬಾರ್ ಕೌನ್ಸಿಲ್​ನಲ್ಲಿ ನಿರ್ಬಂಧ ಹೇರಿರುವುದು ತಪ್ಪು, ಆಕೆ ಕಾಶ್ಮೀರದಲ್ಲಿ ಸ್ವತಂತ್ರ ಇಲ್ಲ ಎಂಬ ವಿಚಾರದ ಹಿನ್ನಲೆಯಲ್ಲಿ ಫಲಕ ಪ್ರದರ್ಶಿಸಿದ್ದಾರೆ ಇದರಲ್ಲಿ ತಪ್ಪೇನಿದೆ. ಕೂಡಲೇ ನ್ಯಾಯದೀಶರು ಈ ಬಗ್ಗೆ ಯೋಚಿಸಬೇಕು ಎಂದರು.

ABOUT THE AUTHOR

...view details