ಮೈಸೂರು: ಸದಾ ರಾಜಕೀಯ ಜಂಜಾಟದಿಂದ ಇರುವ ಮಾಜಿ ಸಿಎಂ ಸಿದ್ದರಾಮಯ್ಯ, ಕುಸ್ತಿ ಪಂದ್ಯಾವಳಿ ನೋಡುವ ಮೂಲಕ ರಿಲ್ಯಾಕ್ಸ್ ಮೂಡ್ಗೆ ಜಾರಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟು ಹಬ್ಬದ ನಿಮಿತ್ತ ಕಾಳಸಿದ್ದನಹುಂಡಿ ಗ್ರಾಮದ ಅಖಿಲ ಕರ್ನಾಟಕ ಬಡವರ ಬಂಧು ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಭಾನುವಾರ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ಭಾನುವಾರ ಬೆಳಗ್ಗೆ ಮೈಸೂರಿನ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು, ಎಲ್ಲ ಕಾರ್ಯಕ್ರಮ ಮುಗಿಸಿಕೊಂಡು ಬಂದು ಕುಸ್ತಿ ವೀಕ್ಷಣೆ ಮಾಡಿದರು. ಪೈಲ್ವಾನ್ ನಾಗೇಶ್ ಹಂಪಾಪುರ ಮತ್ತು ಪೈಲ್ವಾನ್ ಹನುಮಂತ ಬೆಳಗಾಂ ಅವರ ನಡುವೆ ನಡೆದ ರೋಚಕ ಕುಸ್ತಿ ಪಂದ್ಯವನ್ನು ಕುತೂಹಲದಿಂದ ನೋಡಿದರು.