ಮೈಸೂರು:ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸುತ್ತೂರು ಜಾತ್ರಾ ಮಹೋತ್ಸವದ ಎರಡನೇ ದಿನ 160 ಜೋಡಿಗಳು ಸಪ್ತಪದಿ ತುಳಿಯಲಿದ್ದು, ಸಾಮೂಹಿಕ ವಿವಾಹಕ್ಕೆ ಮಠ ಸಾಕ್ಷಿಯಾಗಲಿದೆ.
ಸುತ್ತೂರು ಮಠದಲ್ಲಿ 160 ಜೋಡಿಗಳ ಸಾಮೂಹಿಕ ವಿವಾಹ - ಜಾತ್ರ ಮಹೋತ್ಸವಕ್ಕೆ ಲಕ್ಷಾಂತರ ಮಂದಿ
ಶ್ರೀ ಶಿವರಾತ್ರೀಶ್ವರ ಶಿವಯೋಗಿ ಸುತ್ತೂರು ಜಾತ್ರಾ ಮಹೋತ್ಸವದ ಎರಡನೇ ದಿನ 160 ಜೋಡಿಗಳು ಸಪ್ತಪದಿ ತುಳಿಯಲಿದ್ದು, ಸಾಮೂಹಿಕ ವಿವಾಹಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಪ್ತಪದಿ ತುಳಿಯಲಿರುವ 160 ಜೋಡಿಗಳು, ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾಗಲಿದೆ ಸುತ್ತೂರು ಮಠ
ನಂಜನಗೂಡು ತಾಲೂಕಿನ ಸುತ್ತೂರು ಮಠದ ಆವರಣದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಬಂದಿದ್ದು, ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳನ್ನು ಹರಸಲು ಸ್ವಾಮೀಜಿಗಳು, ರಾಜಕೀಯ ಗಣ್ಯರು ಹಾಗೂ ನೂತನ ದಂಪತಿಗಳ ಕುಟುಂಬಸ್ಥರು ಆಗಮಿಸಿದ್ದಾರೆ. ಶಿವರಾತ್ರೀಶ್ವರ ದೇವಾಲಯದಿಂದ ನವಜೋಡಿಗಳಿಗೆ ಮೆರವಣಿಗೆ ಮೂಲಕ ಬೃಹತ್ ವೇದಿಕೆಗೆ ಕರೆತರಲಾಯಿತು.