ಮೈಸೂರು:ಗ್ರೀನ್ ಝೋನ್ ಆಗಿರುವ ರಾಮನಗರ ಕಾರಾಗೃಹಕ್ಕೆ ಪಾದರಾಯನಪುರ ಗಲಭೆ ಆರೋಪಿಗಳನ್ನ ಸ್ಥಳಾಂತರ ಮಾಡಿರುವುದು ತಪ್ಪು ಎಂದು ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಪಾದರಾಯನಪುರ ಗಲಭೆಕೋರರನ್ನ ರಾಮನಗರಕ್ಕೆ ಸ್ಥಳಾಂತರಿಸಿದ್ದು ತಪ್ಪು: ಯತೀಂದ್ರ ಸಿದ್ದರಾಮಯ್ಯ
ಪಾದರಾಯನಪುರ ಗಲಭೆಕೋರರನ್ನ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿತ್ತು. ಅವರನ್ನ ಗ್ರೀನ್ ಝೋನ್ ಇರುವ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿರುವುದು ತಪ್ಪು ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಡವರಿಗೆ ಆಹಾರ ವಿತರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾದರಾಯನಪುರ ಗಲಭೆಕೋರರನ್ನ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿತ್ತು. ಅಲ್ಲದೆ ಸರ್ಕಾರ ಅಂತಹ ಆರೋಪಿಗಳನ್ನ ರೆಡ್ ಝೋನ್ ವಲಯದಲ್ಲಿ ಇಟ್ಟಿದ್ದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಪಾದರಾಯನಪುರ ಆರೋಪಿಗಳು ಉದ್ದೇಶಪೂರ್ವವಾಗಿ ಗಲಭೆ ಮಾಡಲು ಮುಂದಾಗಿರಲಿಲ್ಲ. ನಮಗೇನಾದರು ಆಗಬಹುದು ಎಂಬ ಆತಂಕದಿಂದ ಈ ರೀತಿ ನಡೆದುಕೊಂಡಿದ್ದಾರೆ ಎಂದರು.
ಲಾಕ್ಡೌನ್ ಮಾಡುವ ಮುನ್ನ ಪೂರ್ವಯೋಜಿತವಾಗಿ ಮಾಡಬೇಕು. ಹಾಗೆ ಮಾಡಿದ್ದರೆ ಬಡವರಿಗೆ ಹಾಗೂ ಮಧ್ಯಮವರ್ಗದ ಜನರಿಗೆ ಇಷ್ಟೊಂದು ಸಮಸ್ಯೆ ಉಂಟಾಗುತ್ತಿರಲಿಲ್ಲ. ಕೊರೊನಾದಿಂದ ಪಾರಾಗಲು ಲಾಕ್ಡೌನ್ ಒಂದೇ ಪರಿಹಾರವಲ್ಲ. ಜನ್ಧನ್ ಖಾತೆಗೆ 500 ರೂ. ನೀಡುತ್ತಿರುವುದು ಸಾಲುವುದಿಲ್ಲ. 2000 ರೂ. ನೀಡಬೇಕು ಎಂದರು.