ಮೈಸೂರು: ತಿಂಡಿ ಆಸೆ ತೋರಿಸಿ 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
ಖಾಸಗಿ ಕಂಪನಿಯೊಂದರ ಗೋಡೌನ್ನಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಬಂಧಿತ ಆರೋಪಿ. ಪತ್ನಿ ಮನೆಯಲ್ಲಿ ಇರದ ಸಮಯ ನೋಡಿ ರಂಗಸ್ವಾಮಿ ಎದುರು ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ತಿಂಡಿ ಕೊಡುತ್ತೇನೆ ಬಾ ಎಂದು ಕರೆದಿದ್ದಾನೆ. ಇದನ್ನ ನಂಬಿ ಬಂದ ಬಾಲಕಿಯ ಜೊತೆ ಆರೋಪಿ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗ್ತಿದೆ.