ಕರ್ನಾಟಕ

karnataka

ETV Bharat / city

ಹಿರಿಯ ಸಾಹಿತಿ ಡಾ. ಮಳಲಿ ವಸಂತ ಕುಮಾರ್ ನಿಧನ: ಗಣ್ಯರಿಂದ ಸಂತಾಪ - ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಮಳಲಿ ವಸಂತ ಕುಮಾರ್

ಅನಾರೋಗ್ಯದಿಂದ ಬಳಲುತ್ತಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಮಳಲಿ ವಸಂತ ಕುಮಾರ್ ಅವರು ನಿನ್ನೆ ನಿಧನರಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ ಮಾನಂದವಾಡಿ ರಸ್ತೆಯಲ್ಲಿರುವ ಕಳಲವಾಡಿ ಗ್ರಾಮದ ತೋಟದಲ್ಲಿ ಇಂದು ಮಧ್ಯಾಹ್ನ 2ಕ್ಕೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ಮಳಲಿ ವಸಂತ ಕುಮಾರ್
ಮಳಲಿ ವಸಂತ ಕುಮಾರ್

By

Published : Mar 19, 2021, 1:34 PM IST

ಮೈಸೂರು: ಹಿರಿಯ ಸಾಹಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಮಳಲಿ ವಸಂತ ಕುಮಾರ್ (76) ಅವರು ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಮಳಲಿ ವಸಂತ ಕುಮಾರ್ ಅಂತಿಮ ದರ್ಶನ

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಶಾಂತಾ ಮಳಲಿ, ಪುತ್ರಿ ರೂಪ ಮಳಲಿ, ಪುತ್ರ ರನ್ನ ಮಳಲಿ‌ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೈಸೂರು-ಎಚ್.ಡಿ.ಕೋಟೆ ತಾಲೂಕಿನ ಮಾನಂದವಾಡಿ ರಸ್ತೆಯಲ್ಲಿರುವ ಕಳಲವಾಡಿ ಗ್ರಾಮದ ತೋಟದಲ್ಲಿ ಮಧ್ಯಾಹ್ನ 2ಕ್ಕೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ಇನ್ನು ವಸಂತಕುಮಾರ್ ಮೃತದೇಹ ಅಂತಿಮ ದರ್ಶನಕ್ಕೆ ಪುರಭವನದ ಬಳಿ‌ ವ್ಯವಸ್ಥೆ ಮಾಡಿದ್ದು, ವಿಧಾನ ಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್ ಸೇರಿದಂತೆ ಸಾಹಿತ್ಯ ಹಾಗೂ ರಾಜಕೀಯ ಗಣ್ಯರು ಅಂತಿಮ‌ ದರ್ಶನ ಪಡೆದರು.

ABOUT THE AUTHOR

...view details