ಮೈಸೂರು: ದೋಣಿ ವಿಹಾರದ ಸಂದರ್ಭದಲ್ಲಿ ಸೆಲ್ಫಿ ವಿಡಿಯೋ ತೆಗೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ತಮಿಳುನಾಡು ಮೂಲದ ಖಾಸಗಿ ಕಂಪನಿಯ ಇಂಜಿನಿಯರ್ ಒಬ್ಬ ಮೃತ ಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬಿಳಗುಂದ ಗ್ರಾಮದ ಕೆಸವಿನಕೆರೆಯಲ್ಲಿ ನಡೆದಿದೆ.
ಸೆಲ್ಫಿಗೆ ಮತ್ತೊಂದು ಬಲಿ: ದೋಣಿಯಿಂದ ಕಾಲು ಜಾರಿ ಕೆರೆಗೆ ಬಿದ್ದು ಇಂಜಿನಿಯರ್ ಸಾವು - engineer dies by selfie craze
ತಮಿಳುನಾಡು ಮೂಲದ ಖಾಸಗಿ ಕಂಪನಿಯ ಇಂಜಿನಿಯರ್ ಒಬ್ಬ ಪಿರಿಯಾಪಟ್ಟಣ ತಾಲೂಕಿನ ಬಿಳಗುಂದ ಗ್ರಾಮದ ಕೆಸವಿನಕೆರೆಯಲ್ಲಿ ದೋಣಿ ವಿಹಾರದ ಸಂದರ್ಭ ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ.
![ಸೆಲ್ಫಿಗೆ ಮತ್ತೊಂದು ಬಲಿ: ದೋಣಿಯಿಂದ ಕಾಲು ಜಾರಿ ಕೆರೆಗೆ ಬಿದ್ದು ಇಂಜಿನಿಯರ್ ಸಾವು](https://etvbharatimages.akamaized.net/etvbharat/prod-images/768-512-4025863-thumbnail-3x2-megha.jpg)
ತಮಿಳುನಾಡಿನ ಕೊಯಮತ್ತೂರಿನ ನಿವಾಸಿ ಕಾರ್ತಿಕ್ (24) ಮೃತಪಟ್ಟ ಯುವಕ. ಕಾರ್ತಿಕ್, ತನ್ನ ಸ್ನೇಹಿತರೂ ಆದ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆಂದು ಕುಶಾಲನಗರಕ್ಕೆ ಬಂದಿದ್ದನು. ಗುರುವಾರ ಕುಶಾಲನಗರದಲ್ಲೇ ವಾಸ್ತವ್ಯ ಹೂಡಿ, ನಿನ್ನೆ ಪಿರಿಯಾಪಟ್ಟಣದ ಕೆಸವಿನಕೆರೆಗೆ ದೋಣಿ ವಿಹಾರಕ್ಕೆಂದು ಬಂದಿದ್ದನು. ಈ ಕೆರೆ ಪ್ರವಾಸಿ ತಾಣದಲ್ಲಿ ಒಂದಾಗಿದ್ದು, ಕೆರೆಯ ಮಧ್ಯ, ದೋಣಿಯಲ್ಲಿ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ನಿನ್ನ ಸಂಜೆ ಕಾರ್ತಿಕ್ನ ಶವವನ್ನು ಮುಳುಗು ತಜ್ಞರು ಹೊರ ತೆಗೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.