ಕರ್ನಾಟಕ

karnataka

ETV Bharat / city

ದರ್ಶನ್ ಹಲ್ಲೆ ಆರೋಪ ಪ್ರಕರಣ: ಘಟನೆಯ ಸಂಪೂರ್ಣ ವಿವರ ನೀಡಿದ ಹೋಟೆಲ್ ಸಿಬ್ಬಂದಿ, ಮಾಲೀಕ - ದಿ ಪ್ರಿನ್ಸ್​ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ

ಹೋಟೆಲ್​ ಸಿಬ್ಬಂದಿ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಹೋಟೆಲ್​ ಮಾಲೀಕ ಸಂದೇಶ್ ಹಾಗೂ ಹೋಟೆಲ್ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.

hotel staff case
ದರ್ಶನ್ ಹಲ್ಲೆ ಆರೋಪ ಪ್ರಕರಣ

By

Published : Jul 16, 2021, 6:25 PM IST

ಮೈಸೂರು: ನಟ ದರ್ಶನ್ ದಿ ಪ್ರಿನ್ಸ್​ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿ ಮತ್ತು ಮಾಲೀಕ ಸಂದೇಶ್ ಸಂಪೂರ್ಣ ವಿವರ ನೀಡಿದ್ದಾರೆ.

ದರ್ಶನ್ ಹಲ್ಲೆ ಆರೋಪ ಪ್ರಕರಣದ ಕುರಿತು ಸಂಪೂರ್ಣ ವಿವರ ನೀಡಿದ ಹೋಟೆಲ್ ಸಿಬ್ಬಂದಿ

ನಟ ದರ್ಶನ್ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವರ ಸೂಚನೆಯ ಆದೇಶದಂತೆ ತನಿಖೆ ಕೈಗೊಂಡಿರುವ ಮೈಸೂರಿನ ಎಸಿಪಿ‌ ನೇತೃತ್ವದ ತಂಡ ಇಂದು ಸಂದೇಶ್ ಪ್ರಿನ್ಸ್​ ಹೋಟೆಲ್​ಗೆ ಆಗಮಿಸಿ, ಘಟನೆಯ ಬಗ್ಗೆ ಅಂದು ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಹೋಟೆಲ್​ನಲ್ಲಿದ್ದ ಸಿಸಿಟಿವಿ ಹಾಗೂ ಕೆಲವು ಮಹತ್ವದ ದಾಖಲೆಗಳನ್ನು ಪಡೆದು ಹೋದರು.

ನಂತರ ಮಾತನಾಡಿದ ಹೋಟೆಲ್ ಸಿಬ್ಬಂದಿ ಸಮೀರ್, ಘಟನೆ ನಡೆದ ದಿನ ಸರ್ವಿಸ್ ತಡವಾಗಿತ್ತು. ಮ್ಯಾನೇಜರ್ ಎಲ್ಲಿ ಎಂದು ಕೋಪದಿಂದ ಕೂಗಾಡಿದರು. ಆದರೆ ನನ್ನ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ:'ಸರ್ವಿಸ್‌ ತಡವಾಗಿದ್ದಕ್ಕೆ ದರ್ಶನ್‌ ಕೋಪಗೊಂಡಿದ್ದರು, ಆದ್ರೆ ಯಾರ ಮೇಲೂ ಹಲ್ಲೆ ಮಾಡಿಲ್ಲ'

ಘಟನೆ ನಡೆದ ದಿನ ದರ್ಶನ್ ಸರ್ ಕೋಪದಲ್ಲಿದ್ದರು. ನಮ್ಮ ಮೇಲೆ‌ ಹಲ್ಲೆ ಮಾಡಿಲ್ಲ, ಕೂಗಾಡಿದರು. ನಾನು ಆಗ ಎಂಡಿಗೆ ಫೋನ್ ಮಾಡಿ ತಿಳಿಸಿದೆ ಎಂದು ಬೆಲ್ ಬಾಯ್ ಪ್ರಸನ್ನ ವಿವರಿಸಿದರು.

ಇನ್ನು ಪೊಲೀಸ್ ತನಿಖೆಯ ನಂತರ ಘಟನೆ ಬಗ್ಗೆ ವಿವರಿಸಿದ ಹೋಟೆಲ್ ಮಾಲೀಕ ಸಂದೇಶ್, ನಾವು ಯಾರನ್ನು ಜಾತಿ-ಧರ್ಮ ನೋಡಿ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಅನುಭವ ಇದ್ದರೆ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ. ಅಂದು ನಡೆದ ಘಟನೆಯ ಬಗ್ಗೆ ಇಂದು ಪೊಲೀಸರು ಎಲ್ಲಾ ದಾಖಲೆಗಳನ್ನು ಪಡೆದುಕೊಂಡು ಹೋಗಿದ್ದಾರೆ ಎಂದರು.

ABOUT THE AUTHOR

...view details