ಮೈಸೂರು: ಮಳೆಗಾಲ ಆರಂಭವಾದ ಹಿನ್ನೆಲೆ ಕೆಲವು ದಿನಗಳಿಂದ ಸಫಾರಿಗೆ ಅರಣ್ಯ ಇಲಾಖೆ ವಿರಾಮ ನೀಡಿತ್ತು. ಆದ್ರೆ ಮಳೆ ಕಡಿಮೆಯಾದ ಕಾರಣ ಸಫಾರಿ ಮತ್ತೆ ಆರಂಭ ಮಾಡಲಾಗಿದ್ದು, ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ ಪಡೆದ ಸಫಾರಿ ಪ್ರಿಯರಿಗೆ ಸಂತಸ ಮನೆಮಾಡಿದೆ.
ಒಂದೇ ಬಾರಿ ನಾಲ್ಕು ಹುಲಿಗಳ ದರ್ಶನ ಪಡೆದ ಸಫಾರಿ ಪ್ರಿಯರು ಫುಲ್ ಖುಷ್ - undefined
ಕಬಿನಿ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡತ್ತಿರುವ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಸಫಾರಿ ಪ್ರಿಯರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ನಾಲ್ಕು ಹುಲಿಗಳು
ಕಬಿನಿ ಹಿನ್ನೀರು ಪ್ರದೇಶದಲ್ಲಿ ನಾಲ್ಕು ಹುಲಿಗಳ ದರ್ಶನ
ಹೌದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ದಮ್ಮನಕಟ್ಟೆ, ವೀರನಹೊಸಹಳ್ಳಿ, ನಾಣಚ್ಚಿ ಈ ಮೂರು ಕಡೆ ಸಫಾರಿ ವಲಯಗಳಿವೆ. ಆದರೆ, ಈ ಸಫಾರಿ ವಲಯಗಳಲ್ಲಿ ಗುಂಪು ಗುಂಪುಗಳಾಗಿ ಹುಲಿಗಳು ಕಾಣಿಸಿಕೊಳ್ಳುವುದೇ ತೀರ ಅಪರೂಪ. ಕಬಿನಿ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡತ್ತಿರುವ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ನಾಲ್ಕು ಹುಲಿಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಸಫಾರಿ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.