ಮೈಸೂರು: ರೋಹಿಣಿ ಸಿಂಧೂರಿಗೆ ತಾಯಿ ಹೃದಯ ಇಲ್ಲ, ಹಸುವಿನಂತಿರುವ ವ್ಯಾಘ್ರ ಮುಖದ ಅಧಿಕಾರಿ ಅವರು ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.
ಹಸುವಿನಂತಿರುವ ವ್ಯಾಘ್ರ ಮುಖದ ಅಧಿಕಾರಿ ರೋಹಿಣಿ: ಸಾ.ರಾ.ಮಹೇಶ್ ವಾಗ್ದಾಳಿ
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಆರೋಪಗಳಿಗೆ ಕಿಡಿಕಾರಿದ ಸಾ.ರಾ.ಮಹೇಶ್, ರೋಹಿಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾವನ್ನು ಬಯಲಿಗೆ ಎಳೆಯಲು ಹೋಗಿ ಟ್ರಾನ್ಸ್ಫರ್ ಆಯ್ತು ಅನ್ನೋ ರೋಹಿಣಿ ಸಿಂಧೂರಿ ಹೇಳಿಕೆಗೆ ಗುಡುಗಿದರು. ಕಳೆದ ಎಂಟು ತಿಂಗಳಿನಿಂದ ಏನ್ ಮಾಡ್ತಾ ಇದ್ರಿ? ಒತ್ತುವರಿ ಬಿಡಿಸಬೇಕಿತ್ತು. ಯಾರ್ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ಇವಾಗಲೂ ಗವರ್ನರ್ ರಿಪೋರ್ಟ್ ಕೊಡಿ ಎಂದು ಕಿಡಿಕಾರಿದರು.
ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದರೆ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಒಂದು ಸಾವಿರ ಮಂದಿ ಪ್ರಾಣ ಉಳಿಯಬೇಕಿತ್ತು. ಹಳ್ಳಿಗಳಿಗೆ ಎಷ್ಟು ದಿವಸ ಹೋಗಿ ಸಮಸ್ಯೆ ಆಲಿಸಿದರು ಎಂದು ಪ್ರಶ್ನಿಸಿದರು.