ಮೈಸೂರು : ಸಂಸದರ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಬರುವ ಪ್ರೋಟೋಕಾಲ್ ಇದೆಯಾ..? ಆದರೆ, ಸುಮಲತಾ ಅವರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದಾರೆ. ಈ ಬಗ್ಗೆ ಕಾನೂನಿನ ಪ್ರಕಾರ ತನಿಖೆಯಾಗಲಿ ಎಂದು ಶಾಸಕ ಸಾ ರಾ ಮಹೇಶ್ ಒತ್ತಾಯಿಸಿದರು.
ಸಂಸದೆ ಸುಮಲತಾ ಅಂಬರೀಶ್ ಕಾರ್ಯಕ್ರಮಕ್ಕೆ ಜೆಡಿಎಸ್ ಕಾರ್ಯಕರ್ತರ ಅಡ್ಡಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಚನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನದ ನೀಡಿದೆ.
ರೈತರ ಮನವಿ ಮೇರೆಗೆ ಸುಮಲತಾ ಅಂಬರೀಶ್ ಅವರೂ ಇಲಾಖೆಯಿಂದ ₹50 ಲಕ್ಷ ಅನುದಾನ ನೀಡಿದ್ದಾರೆ. ಹಾಗಾಗಿ, ಅವರೇ ಗುದ್ದಲಿಪೂಜೆ ನೆರವೇರಿಸಲಿ ಎಂದು ನಾನು ಹೋಗಿರಲಿಲ್ಲ. ಆದರೆ, ಅಲ್ಲಿಯೂ ಇಂಜಿನಿಯರ್ಗಳು ಸರಿಯಾಗಿ ವ್ಯವಸ್ಥೆ ಮಾಡಲಿಲ್ಲ ಎಂಬ ಕಾರಣ ಹೇಳಿ ಹಿಂತಿರುಗಿದ್ದಾರೆ.