ಮೈಸೂರು: ಜಿಲ್ಲೆಯಲ್ಲಿ ಎರಡು ಉಸ್ತುವಾರಿಗಳಿವೆ ಎಂಬ ಸಾ.ರಾ.ಮಹೇಶ್ ಆರೋಪಕ್ಕೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಸಾ.ರಾ.ಮಹೇಶ್ ಆರೋಪಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದೇನು? - mysore latest news
2 ಕೋಟಿ ರೂ. ಪಡೆದು ಅಬಕಾರಿ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂಬುದು ಸುಳ್ಳು. ವರ್ಗಾವಣೆಯಾದ ಅಧಿಕಾರಿ ಭ್ರಷ್ಟರಾಗಿದ್ದು, ಅವರನ್ನು ವರ್ಗಾವಣೆ ಮಾಡಿರುವ ವಿಚಾರವನ್ನು ಅಬಕಾರಿ ಸಚಿವರೇ ನನಗೆ ತಿಳಿಸಿದ್ದಾರೆ. ಮೈಸೂರಿನಲ್ಲಿ ವರ್ಗಾವಣೆಯ ದಂಧೆ ನಡೆದಿಲ್ಲ ಎಂದು ಸಾ.ರಾ.ಮಹೇಶ್ ಆರೋಪಕ್ಕೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಅನಧಿಕೃತ ಹಾಗೂ ಅಧಿಕೃತ ಉಸ್ತುವಾರಿ ಸಚಿವರು ಇಲ್ಲ. ಮುಖ್ಯಮಂತ್ರಿಗಳು ಒಬ್ಬರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಾರೆ. ಎರಡು ಉಸ್ತುವಾರಿ ಸಚಿವರು ನನಗೆ ತಿಳಿದ ಮಟ್ಟಿಗೆ ಇಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ.
2 ಕೋಟಿ ರೂ. ಪಡೆದು ಅಬಕಾರಿ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ ಎಂಬುದು ಸುಳ್ಳು. ವರ್ಗಾವಣೆಯಾದ ಅಧಿಕಾರಿ ಭ್ರಷ್ಟರಾಗಿದ್ದು, ಅವರನ್ನು ವರ್ಗಾವಣೆ ಮಾಡಿರುವ ವಿಚಾರವನ್ನು ಅಬಕಾರಿ ಸಚಿವರೇ ನನಗೆ ತಿಳಿಸಿದ್ದಾರೆ. ಇಲ್ಲಿ ವರ್ಗಾವಣೆಯ ದಂಧೆ ನಡೆದಿಲ್ಲ. ವರ್ಗಾವಣೆಯಲ್ಲಿ ಹೆಚ್. ವಿಶ್ವನಾಥ್ ಪಾತ್ರ ಇಲ್ಲ. ಸದ್ಯಕ್ಕೆ ವಿಶ್ವನಾಥ್ ಎಮ್ಎಲ್ಸಿ ಆಗಬೇಕೆಂದು ದೇವಸ್ಥಾನ, ಬೆಂಗಳೂರು ಎಂದೆಲ್ಲಾ ಓಡಾಡುತ್ತಿದ್ದಾರೆ. ಅವರನ್ನು ಏಕೆ ಎಳೆದುಕೊಂಡು ತರುತ್ತೀರಿ. ದಂಧೆ ಎನ್ನುವುದು ನಮ್ಮ ಜಾಯಮಾನದಲ್ಲೇ ಇಲ್ಲ ಎಂದು ಬೆಳಿಗ್ಗೆ ಶಾಸಕ ಸಾ. ರಾ. ಮಹೇಶ್ ಮಾಡಿದ್ದ ಆರೋಪಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿರುಗೇಟು ನೀಡಿದ್ದಾರೆ.