ಕರ್ನಾಟಕ

karnataka

ETV Bharat / city

ಸಚಿವ ಮಾಧುಸ್ವಾಮಿ ತಾವೊಬ್ಬರೇ ಮೇಧಾವಿ ಅಂದುಕೊಂಡಿದ್ದಾರೆ: ಎಸ್ ಟಿ ಸೋಮಶೇಖರ್​ - ಈಟಿವಿ ಭಾರತ್​ ಕರ್ನಾಟಕ

ನಾನೇ ಮೇಧಾವಿ, ನಾನೇ ಎಲ್ಲಾ ಅನ್ನೋದನ್ನು ಸಚಿವ ಮಾಧುಸ್ವಾಮಿ ತಲೆಯಿಂದ ತೆಗೆದು ಹಾಕಬೇಕು. ಮೇಧಾವಿ ಸಚಿವರು ಹೇಳಿದಂತೆ ಸರ್ಕಾರ ಕುಂಟುತ್ತಿಲ್ಲ. ಬಹುಶಃ ಅವರ ಇಲಾಖೆಯ ಬಗ್ಗೆ ಅವರು ಹೇಳಿರಬಹುದು ಎಂದು ಎಸ್ ಟಿ ಸೋಮಶೇಖರ್ ತಮ್ಮ ಸಂಪುಟ ಸಹೋದ್ಯೋಗಿ ಕುರಿತು ಗರಂ ಆದರು.

s-t-somashekhar
ಎಸ್ ಟಿ ಸೋಮಶೇಖರ್

By

Published : Aug 14, 2022, 7:25 PM IST

ಮೈಸೂರು : ರಾಜ್ಯದಲ್ಲಿ ಜೆ ಸಿ ಮಾಧುಸ್ವಾಮಿ ತಮಗಿಂತ ಮೇಧಾವಿ ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ. ನಾನೇ ಮೇಧಾವಿ, ನಾನೇ ಎಲ್ಲಾ ತಿಳಿದಿರುವವನು ಅಂದುಕೊಂಡಿದ್ದಾರೆ. ಹೀಗಂತ ಸ್ವಪಕ್ಷೀಯ ಸಚಿವ ಮಾಧುಸ್ವಾಮಿ ವಿರುದ್ಧ ಸಹಕಾರ ಸಚಿವ ಎಸ್ ಟಿ ಸೋಮಶೇಖರ್​ ಹರಿಹಾಯ್ದರು.

ಸರ್ಕಾರ ತೆವಳುತ್ತಿದೆ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ಮೇಧಾವಿ ಸಚಿವರು ಹೇಳಿದಂತೆ ಸರ್ಕಾರ ಕುಂಟುತ್ತಿಲ್ಲ. ಬಹುಶಃ ಅವರ ಇಲಾಖೆಯ ಬಗ್ಗೆ ಅವರು ಹೇಳಿರಬಹುದು ಎಂದು ಟೀಕಿಸಿದರು.

ಸರ್ಕಾರದ ಎಲ್ಲಾ ಇಲಾಖೆಗಳ ಬಗ್ಗೆ ಮಾಧ್ಯಮಕ್ಕೆ ಅವರೇ ಮಾಹಿತಿ ನೀಡುತ್ತಾರೆ. ಆಗ ಇವರಿಗೆ ಗೊತ್ತಾಗಲಿಲ್ಲವಾ? ಅದು ಅವರದೇ ಧ್ವನಿಯಾಗಿದ್ದರೆ ತಪ್ಪು. ಆಗಸ್ಟ್​ 28ಕ್ಕೆ ಒಂದು ವರ್ಷದ ಸಾಧನೆಯ ಕಾರ್ಯಕ್ರಮ ಇದೆ. ಬಿ ಎಸ್ ಯಡಿಯೂರಪ್ಪನವರು ಇದ್ದಾಗಲೂ ಕೆಲಸವಾಗಿದೆ. ಬಸವರಾಜ ಬೊಮ್ಮಾಯಿವರ ಸರ್ಕಾರದಲ್ಲೂ ಸಹಾ ಉತ್ತಮ ಕೆಲಸವಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಮಾಧುಸ್ವಾಮಿ ಮೇಧಾವಿ ಅಂದುಕೊಂಡಿದ್ದಾರೆ

ಎಸ್ ಟಿ ಸೋಮಶೇಖರ್ ನಾನು ಹೇಳಿದ ಕೆಲಸ ಮಾಡಿಲ್ಲ ಎಂಬ ಸಚಿವ ಜೆ ಸಿ ಮಾಧುಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಮಂತ್ರಿ ಹೇಳಿದ್ರು ಅಂತಾ ಕಾನೂನು ಬಾಹಿರವಾಗಿ ನೋಟಿಸ್ ಕೊಡಲು ಸಾಧ್ಯವಿಲ್ಲ. ಸಹಕಾರ ಬ್ಯಾಂಕ್ ರೈತರ ಆಸ್ತಿ ರೈತರಿಗೆ ಸೇರಿದ್ದು. ಮಾಧುಸ್ವಾಮಿ ಹೇಳಿಕೆಯಲ್ಲಿ ಯಾವುದೇ ಸತ್ಯ ಇಲ್ಲ. ಒಬ್ಬರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ತನಿಖೆಯಲ್ಲಿ ತಪ್ಪಿತಸ್ಥರು ಅಂತಾ ಆದರೆ ಮಾತ್ರ ಕ್ರಮ ಎಂದು ಹೇಳಿದರು.

ಇದನ್ನೂ ಓದಿ :ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ.. ಹೀಗಂದ್ರಾ ಸಚಿವ ಮಾಧುಸ್ವಾಮಿ?

ABOUT THE AUTHOR

...view details