ಕರ್ನಾಟಕ

karnataka

ETV Bharat / city

ಸಮ್ಮಿಶ್ರ ಸರ್ಕಾರ ಬೀಳಲು ಕಾರಣವೇನು ಅಂತ ಮಾಜಿ ಸಿಎಂಗಳಿಗೆ ಗೊತ್ತು: ಸಚಿವ ಸೋಮಶೇಖರ್ - ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರ ಪತನವಾಗಿ ಎರಡು ವರ್ಷ ಕಳೆದಿವೆ. ಮಾಜಿ ಸಿಎಂಗಳು ಮಾತನಾಡುವುದಾದರೆ ಮುಂದಿನ ಚುನಾವಣೆ ಬಗ್ಗೆ ಮಾತನಾಡಲಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

s t somashekar
ಸಚಿವ ಸೋಮಶೇಖರ್

By

Published : Oct 13, 2021, 1:57 PM IST

Updated : Oct 13, 2021, 3:37 PM IST

ಮೈಸೂರು: ಸಮ್ಮಿಶ್ರ ಸರ್ಕಾರ ಬೀಳಲು ಕಾರಣವೇನು ಅಂತ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಇಂಚಿಂಚೂ ಗೊತ್ತಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಸಚಿವ ಎಸ್.ಟಿ. ಸೋಮಶೇಖರ್

ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗಳಿಬ್ಬರ ಆರೋಪ-ಪ್ರತ್ಯಾರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಇಬ್ಬರೂ ಕೂಡ ರಾಜಕೀಯ ದಿಗ್ಗಜರು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವನಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಿ ಎರಡು ವರ್ಷ ಕಳೆದಿವೆ. ಮಾತನಾಡುವುದಾದರೆ ಮುಂದಿನ ಚುನಾವಣೆ ಬಗ್ಗೆ ಮಾತನಾಡಲಿ ಎಂದು ಎಂದರು.

ಜಂಬೂಸವಾರಿ ಮೆರವಣಿಗೆ ನೋಡಲು 500ಜನರಿಗೆ ಅವಕಾಶ:

ಜಂಬೂಸವಾರಿ ಮೆರವಣಿಗೆ ನೋಡಲು 500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಯಾರನ್ನು ಅರಮನೆಯೊಳಗೆ ಜಂಬೂಸವಾರಿ ನೋಡಲು ಬಿಡಬೇಕು ಎಂಬುದರ ಬಗ್ಗೆ ಇಂದು ಸಂಜೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಡಿಕೆಶಿ ಬಗ್ಗೆ ಉಗ್ರಪ್ಪ-ಸಲೀಂ ಸಂಭಾಷಣೆ ವಿಡಿಯೋ ವೈರಲ್‌: ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದ ಉಗ್ರಪ್ಪ

Last Updated : Oct 13, 2021, 3:37 PM IST

ABOUT THE AUTHOR

...view details