ಕರ್ನಾಟಕ

karnataka

ETV Bharat / city

RSS ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ‌ ಕೊರತೆಯಿರಬಹುದು: ಸಚಿವ ಎಸ್.ಟಿ. ಸೋಮಶೇಖರ್

ಕುಮಾರಸ್ವಾಮಿ ಅವರಿಗೆ ಆರ್​ಎಸ್​ಎಸ್​​ ಬಗ್ಗೆ ಮಾಹಿತಿ ಏನಿದೆಯೋ ಗೊತ್ತಿಲ್ಲ. ದೇಶ ಹಾಗೂ ದೇಶದ ಪ್ರಗತಿ ಬಗ್ಗೆ ಚರ್ಚೆ‌‌ ಮಾಡುವ ಅನೇಕ‌ ಮೇಧಾವಿಗಳು ಆರ್ ಎಸ್ ಎಸ್ ನಲ್ಲಿದ್ದಾರೆ. ನೆಗೆಟಿವ್ ಆಗಿ ಯೋಚಿಸುವವರು ಆರ್​ಎಸ್​ಎಸ್ ನಲ್ಲಿಲ್ಲ. ಕುಮಾರಸ್ವಾಮಿ ಅವರಿಗೆ ಮಾಹಿತಿ ‌ಕೊರತೆ ಇರಬಹುದು ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

s t somashekar
ಸಚಿವ ಎಸ್ ಟಿ ಸೋಮಶೇಖರ್

By

Published : Oct 6, 2021, 4:56 PM IST

ಮೈಸೂರು: ದೇಶ ಹಾಗೂ ದೇಶದ ಪ್ರಗತಿಯ ಬಗ್ಗೆ‌ ಚರ್ಚೆ ಮಾಡುವ ಅನೇಕ ಮೇಧಾವಿಗಳು RSSನಲ್ಲಿ ಇದ್ದಾರೆ. ನೆಗೆಟಿವ್ ಆಗಿ ಯೋಚಿಸುವವರು ಆರ್​ಎಸ್​ಎಸ್ ನಲ್ಲಿಲ್ಲ. ಹೆಚ್​​ಡಿ ಕುಮಾರಸ್ವಾಮಿ ಅವರಿಗೆ ಮಾಹಿತಿ ‌ಕೊರತೆ ಇರಬಹುದು ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಇಂದು ಮೃಗಾಲಯದಲ್ಲಿ ಮಾಧ್ಯಮಗಳೊಂದಿಗೆ ‌ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ‌ಕಮೀಷನರ್‌ ಸಭೆ ನಡೆಸಿ‌ ಮಾತನಾಡಿದ್ದೇವೆ.‌ ಸಾರ್ವಜನಿಕರಿಗೆ ಜಂಬೂಸವಾರಿಯನ್ನು ವರ್ಚುಯಲ್ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಲಾಗುವುದು. ‌ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ಇರಲಿದೆ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಹೆಚ್​ಡಿಕೆ ಹೇಳಿಕೆ ಮತ್ತು ದಸರಾ ಬಗ್ಗೆ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ

ಆರ್​ಎಸ್​ಎಸ್ ಬಗೆಗಿನ‌ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ‌ ಪ್ರತಿಕ್ರಿಯಿಸಿ, ಅವರಿಗೆ ಮಾಹಿತಿ ಏನಿದೆಯೋ ಗೊತ್ತಿಲ್ಲ. ದೇಶ ಹಾಗೂ ದೇಶದ ಪ್ರಗತಿ ಬಗ್ಗೆ ಚರ್ಚೆ‌‌ ಮಾಡುವ ಅನೇಕ‌ ಮೇಧಾವಿಗಳು ಆರ್ ಎಸ್ ಎಸ್ ನಲ್ಲಿದ್ದಾರೆ. ದೇಶಕ್ಕೋಸ್ಕರ, ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಚಿಂತನೆ ಮಾಡುವವರು ಇದ್ದಾರೆ.

ಕುಮಾರಸ್ವಾಮಿ ಅವರಿಗೆ ಮಾಹಿತಿ ಕೊರತೆ ಇರಬಹುದು. ರಾಜ್ಯದಲ್ಲಿ ಸಂಘ ಪರಿವಾರದ ಒತ್ತಡ‌, ಮಧ್ಯಸ್ಥಿಕೆ ಕಾಣುತ್ತಿಲ್ಲ. ಈಗಲೇ ಚುನಾವಣೆಗೆ ಹೊರಟಿದ್ದಾರೆ. ಇನ್ನೂ ಸಮಯ ಇದೆ, ‌ನೋಡೋಣ ಎಂದರು.

ಇದನ್ನೂ ಓದಿ:RSS ಸಂಘದ ಶಾಖೆಗೆ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು: ಹೆಚ್​ಡಿಕೆ ಟಾಂಗ್​​!

ಇನ್ಫೋಸಿಸ್ ಸುಧಾಮೂರ್ತಿ ಅವರು ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಬ್ಬರಿಗೂ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಮೈಸೂರಿನ ಜನತೆ ಪರವಾಗಿ ಅಭಿನಂದನೆ ತಿಳಿಸುತ್ತೇನೆ. ಮಲೇಷ್ಯಾ, ಸಿಂಗಾಪುರ್ ಹಾಗೂ ಜರ್ಮನಿಯಿಂದ‌ ಒರಾಂಗೂಟಾನ್ ಹಾಗೂ ಅಪರೂಪದ ಗೊರಿಲ್ಲವನ್ನು ತರಿಸಿದ್ದೇವೆ. ಹಾಗೂ ಅದಕ್ಕೆ ಬೇಕಾದ ಅನುಕೂಲವನ್ನು ಸುಧಾಮೂರ್ತಿ ಅವರು ಮೂರು ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥಿತವಾಗಿ ಕಟ್ಟಿಸಿಕೊಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ನಾಡಹಬ್ಬ ದಸರಾ ಉದ್ಘಾಟನೆಗೆ ಸಕಲ ಸಿದ್ಧತೆ: ಪ್ರತ್ಯಕ್ಷ ವರದಿ

ಅಕ್ಟೋಬರ್ 28ರಂದು ಅವರ ಕೈಯಿಂದ ಉದ್ಘಾಟನೆ ಮಾಡಿಸಲಾಗುವುದು. ಮುಖ್ಯಮಂತ್ರಿಗಳ ಕೈನಲ್ಲಿ‌ ಉದ್ಘಾಟನೆ ಮಾಡಿಸುವ ಯೋಚನೆಯೂ ಇದೆ. ‌ಸುಧಾಮೂರ್ತಿ ಅವರು ಮುಖ್ಯಮಂತ್ರಿ ಬಳಿ ಮಾತನಾಡುತ್ತಾರೆ. ರಿಸರ್ವ್ ಬ್ಯಾಂಕ್ ಅವರು ಸಿಎಸ್​ಆರ್ ಫಂಡ್​ನಲ್ಲಿ ಉತ್ತಮ ಕೆಲಸ ‌ಮಾಡುತ್ತಿದ್ದಾರೆ. ‌ಮೃಗಾಲಯ ಅಧಿಕಾರಿಗಳು ಕೂಡ ಪ್ರವಾಸಿಗರಿಗೆ ಹೊಸ ಹೊಸ ಪ್ರಾಣಿಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಸೋಮಶೇಖರ್ ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಬಗ್ಗೆ ತಿಳಿಸಿ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದೆ. ತುಂತುರು ಮ‌ಳೆ‌ ಇರುವುದರಿಂದ‌ ಸ್ವಲ್ಪ ತೊಂದರೆಯಾಗಿದೆ.‌ ಬರುವವರಿಗೆ ತೊಂದರೆ ಆಗದಂತೆ ಶೆಲ್ಟರ್ ಕವರ್ ಮಾಡಲು ತಿಳಿಸಿದ್ದೇನೆ. ಸಂಜೆ ಅಥವಾ ನಾಳೆ‌ ಮುಂಜಾನೆ ವೇಳೆಗೆ ಎಲ್ಲ ಸಿದ್ಧತೆಗಳು ಪೂರ್ಣವಾಗಲಿವೆ. ಉಳಿದಂತೆ ‌ಎಲ್ಲ ‌ತಯಾರಿ ಆಗಿದೆ ಎಂದರು.

ಚಾಮುಂಡಿ ಬೆಟ್ಟದಲ್ಲಿ ದಸರಾ ಸಿದ್ಧತೆ ಪರಿಶೀಲನೆ:
ನಾಳೆ ದಸರಾ ಉದ್ಘಾಟನೆಯಾಗುತ್ತಿರುವ ಹಿನ್ನೆಲೆ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ ಸಮೀಪ ಸಚಿವರು ಸಿದ್ಧತೆಗಳನ್ನು ಪರಿಶೀಲಿಸಿದರು. ಎಸ್‌.ಟಿ. ಸೋಮಶೇಖರ್ ಮತ್ತು ಸಿ.ಸಿ. ಪಾಟೀಲ್ ದೇವಿ ದರ್ಶನ ಪಡೆದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆ ಮಾಡಲಾಗುತ್ತಿದೆ. ದಸರಾ ಉದ್ಘಾಟನೆಗೆ 100 ಜನರ ಬದಲು 400 ಜನರಿಗೆ ಅವಕಾಶ ಕೊಡಲಾಗಿದೆ. ಕೊರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ABOUT THE AUTHOR

...view details