ಮೈಸೂರು :ಶಾಸಕ ಸಾ.ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಹೆಸರಿನಲ್ಲಿರುವ ಕಲ್ಯಾಣ ಮಂಟಪಕ್ಕೆ ಭೂ ಒತ್ತುವರಿ ಮಾಡಿ ಅಕ್ರಮವೆಸಗಿದ್ದಾರೆ. ದೂರು ನೀಡಿದ ನಂತರ ಆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಮೂಡಾ ಅಧಿಕಾರಿಗಳ ಅಕ್ರಮವೂ ಇದೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ದಾಖಲೆಗಳನ್ನು ಬಿಡುಗಡೆ ಮಾಡಿ ತನಿಖೆಗೆ ಆಗ್ರಹಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಗರದ ದಟ್ಟಗಳ್ಳಿಯಲ್ಲಿರುವ ಶಾಸಕ ಸಾ.ರಾ. ಮಹೇಶ್ ಪತ್ನಿ ಅನಿತಾ ಮಹೇಶ್ ಹೆಸರಿನಲ್ಲಿರುವ ಸಾ.ರಾ ಕಲ್ಯಾಣ ಮಂಟಪಕ್ಕೆ 19 ವರ್ಷಗಳ ಹಿಂದೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಕಲ್ಯಾಣ ಮಂಟಪ ಹಾಗೂ ಅದರ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಈ ಜಾಗ ಅಕ್ರಮ ಎಂದು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ ನಂತರ ಎಚ್ಚೆತ್ತ ಶಾಸಕರು ಆ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸಿದ್ದಾರೆ.