ಕರ್ನಾಟಕ

karnataka

ETV Bharat / city

ಕುರುಬ ಸಮಾಜ ವಿಭಜನೆಗೆ ಆರ್​ಎಸ್​​ಎಸ್ ಕುತಂತ್ರ: ಸಿದ್ದರಾಮಯ್ಯ ಆರೋಪ - ಎಸ್​ಟಿ ಗೆ ಸೇರಿಸುವಂತೆ ಕುರುಬ ಸಮಾಜದ ಪ್ರತಿಭಟನೆ

ಕುರುಬರನ್ನು ಎಸ್​ಟಿಗೆ ಸೇರಿಸುವ ಕುರಿತ ಹೋರಾಟದ ಅವಶ್ಯಕತೆ ಈಗ ಇಲ್ಲ. ಈ ಹೋರಾಟವನ್ನು ಆರ್​ಎಸ್​ಎಸ್ ಕುರುಬ ಸಮಾಜ ವಿಭಜನೆ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

rss-planning-to-divide-kuruba-cast-by-protesting
ಸಿದ್ದರಾಮಯ್ಯ

By

Published : Dec 4, 2020, 3:43 PM IST

Updated : Dec 4, 2020, 4:06 PM IST

ಮೈಸೂರು: ಕುರುಬರನ್ನು ಎಸ್​​ಟಿಗೆ ಸೇರಿಸುವ ಬಗ್ಗೆ ಹೋರಾಟ ಅಗತ್ಯ ಇಲ್ಲ. ಈ ಹೋರಾಟದ ಹಿಂದೆ ಆರ್​ಎಸ್ಎಸ್​ನ ಕುತಂತ್ರ ಅಡಗಿದೆ ಎಂದು ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.

ನಗರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಕಾರ ಕುರುಬರನ್ನು ಎಸ್​​ಟಿಗೆ ಸೇರಿಸುವ ಕುರಿತು ಹೋರಾಟದ ಅವಶ್ಯಕತೆ ಈಗ ಇಲ್ಲ. ಈ ಹೋರಾಟವನ್ನು ಆರ್​​ಎಸ್​​ಎಸ್ ಕುರುಬ ಸಮಾಜವನ್ನು ವಿಭಜಿಸಲು ಹಾಗೂ ನನ್ನನ್ನು ವೀಕ್ ಮಾಡಲು ಬಳಸಿಕೊಳ್ಳುತ್ತಿದೆ. ‌ಇದಕ್ಕೆ ಈಶ್ವರಪ್ಪ ಕೈ ಗೊಂಬೆ ಆಗಿದ್ದಾರೆ ಎಂದು ಆರೋಪಿಸಿದರು.

ಕುರುಬ ಸಮಾದ ಹೋರಾಟದ ಕುರಿತು ಸಿದ್ದರಾಮಯ್ಯ ಹೇಳಿಕೆ

ಇದನ್ನು ಓದಿ- ಕುರುಬ ಸಮುದಾಯ ಎಸ್​​ಟಿಗೆ ಸೇರಿಸುವಂತೆ ಫೆ.27 ರಂದು ಬೃಹತ್ ಪಾದಯಾತ್ರೆ!

ನಾಯಕತ್ವ ಯಾರು ವಹಿಸುತ್ತಾರೆ ಎಂಬುದು ಮುಖ್ಯ ಅಲ್ಲ. ಈ ವಿಚಾರದಲ್ಲಿ ಹೋರಾಟವೇ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇದನ್ನು ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಬಹುದು ಎಂದರು.

Last Updated : Dec 4, 2020, 4:06 PM IST

ABOUT THE AUTHOR

...view details