ಕರ್ನಾಟಕ

karnataka

ETV Bharat / city

ಅಗೌರವದಿಂದ ನಡೆದುಕೊಳ್ಳುವ ಉದ್ದೇಶವಿಲ್ಲ, ಶಿಷ್ಟಾಚಾರ ಪಾಲಿಸುತ್ತೇನೆ: ರೋಹಿಣಿ ಸಿಂಧೂರಿ - ಶಾಸಕ ಸಾ.ರಾ.ಮಹೇಶ್ ಸುದ್ದಿ

ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಅತಂಹ ಉದ್ದೇಶವೂ ನನಗಿಲ್ಲ. ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುತ್ತೇನೆ ಎಂದ ರೋಹಿಣಿ ಸಿಂಧೂರಿ.

rohini-sindhuri-apologies-to-mla-mahesh-report-revealed
ಶಾಸಕ ಸಾ.ರಾ.ಮಹೇಶ್​​ಗೆ ಕ್ಷಮಾಪಣೆ ಕೇಳಿದ ರೋಹಿಣಿ ಸಿಂಧೂರಿ: ವರದಿ ಬಹಿರಂಗ

By

Published : Oct 8, 2021, 1:20 PM IST

Updated : Oct 10, 2021, 12:05 PM IST

ಮೈಸೂರು:ಕೆ.ಆರ್.ನಗರ ಶಾಸಕ ಸಾ.ರಾ‌.ಮಹೇಶ್ ಮತ್ತು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ನಡುವಿನ ಸಂಘರ್ಷಕ್ಕೆ ತಿರುವು ಸಿಕ್ಕಿದ್ದು, ರೋಹಿಣಿ ಸಿಂಧೂರಿ ಅವರು ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುವುದಾಗಿ ತಿಳಿಸಿದ್ದಾರೆ.

ವರದಿಯಲ್ಲಿ ಏನಿದೆ?

ಜ‌ನವರಿ 12ರಂದು ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಗದಪತ್ರ ಸಮಿತಿ ಸಭೆಯಲ್ಲಿ ರೋಹಿಣಿ ಸಿಂಧೂರಿ ಉದ್ದಟತನ ತೋರಿದ್ದರು ಎಂದು ಆರೋಪಿಸಿ ಸಾ.ರಾ.ಮಹೇಶ್ ಹಕ್ಕುಚ್ಯುತಿ ಮಂಡಿಸಿದ್ದರು.

ಹಕ್ಕು ಬಾಧ್ಯತೆಗಳ ಸಮಿತಿಗೆ ಉತ್ತರಿಸಿರುವ ರೋಹಿಣಿ ಸಿಂಧೂರಿ, ಇನ್ನು ಮುಂದೆ ಯಾವುದೇ ಸಮಿತಿ, ಶಾಸಕರೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಶಿಷ್ಟಾಚಾರವನ್ನು ಪರಿಪಾಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸಿಂಧೂರಿ ಉತ್ತರ ನೀಡಿರುವ ಸಮಿತಿಯ ವರದಿ ಬಹಿರಂಗವಾಗಿದೆ. ಮುಡಾ (MUDA) ಸಭೆಗೆ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆಯ ಸಭೆಗೆ ಗೈರಾಗಿದ್ದ ಸಿಂಧೂರಿ‌ ವಿರುದ್ಧ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರಾಗಿರುವ ಸಾ.ರಾ‌.ಮಹೇಶ್ ಹಕ್ಕುಚ್ಯುತಿ ಮಂಡಿಸಿದ್ದರು.

ಇದನ್ನೂ ಓದಿ:IT ಅಧಿಕಾರಿಗಳು ವಿಚಾರಣೆಗೆ ಕರೆದಾಗ ಉಮೇಶ್ ಹಾಜರಾಗುತ್ತಾರೆ: ಬಿ.ಎಸ್‌.ಯಡಿಯೂರಪ್ಪ

Last Updated : Oct 10, 2021, 12:05 PM IST

ABOUT THE AUTHOR

...view details