ಮೈಸೂರು: ಮೈಸೂರಿನಲ್ಲಿ ಜೋರು ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದ ಬೋಗಾದಿಯ ನಾಗಲಿಂಗೇಶ್ವರ ದೇವಸ್ಥಾನದ ಬಳಿಯ ರಸ್ತೆ ಕೊಚ್ಚಿ ಹೋಗಿದೆ. ಬೋಗಾದಿ ಗ್ರಾಮಕ್ಕೆ ತೆರಳುವ ಸಂಪರ್ಕ ಕಡಿತಗೊಂಡಿದೆ. ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಭಾರಿ ಮಳೆಗೆ ಮೈಸೂರಿನಲ್ಲಿ ಕೊಚ್ಚಿ ಹೋದ ರಸ್ತೆ; ಗ್ರಾಮಕ್ಕೆ ಸಂಪರ್ಕ ಕಡಿತ - rain in mysore
ಮೈಸೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಅವಾಂತರ ಸೃಷ್ಟಿಸಿದೆ.
ಭಾರಿ ಮಳೆಗೆ ಮೈಸೂರಿನಲ್ಲಿ ಕೊಚ್ಚಿ ಹೋದ ರಸ್ತೆ
ಮಳೆಯ ಆರ್ಭಟದಿಂದ ಮೈಸೂರಿನ ಹಲವೆಡೆ ರಸ್ತೆಗಳಲ್ಲಿ ಡಾಂಬರು ಕಿತ್ತು ಬಂದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಶಾರದಾದೇವಿ ನಗರ ಮಳೆ ನೀರಿನಿಂದ ಆವೃತವಾಗಿದೆ. 60 ಅಡಿ ಅಗಲವಿದ್ದ ಆನಂದ ನಗರ ರಾಜಕಾಲುವೆಯನ್ನು ಒತ್ತುವರಿ ಮಾಡಿದ ಪರಿಣಾಮ 15 ಅಡಿಗೆ ತಲುಪಿದ್ದು, ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೊಳಚೆ ನೀರಿನಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಇಂದು, ನಾಳೆ ಭಾರಿ ಮಳೆ: ಆರೆಂಜ್ ಅಲರ್ಟ್ ಘೋಷಣೆ
Last Updated : May 17, 2022, 10:37 AM IST