ಮೈಸೂರು: ಕೊರೊನಾ ಸೋಂಕಿನಿಂದ ಗುಣಮುಖನಾದ ಮೈಸೂರಿನ ಮೊದಲ ವ್ಯಕ್ತಿಯನ್ನು (ರೋಗಿ ಸಂಖ್ಯೆ 20) ಕೋವಿಡ್-19ರ ಆಸ್ಪತ್ರೆಯಿಂದ ಮಂಗಳವಾರ ಡಿಸ್ಚಾರ್ಚ್ ಮಾಡಲಾಗಿದೆ. ಈ ಮೂಲಕ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 35ರಿಂದ 34ಕ್ಕೆ ಇಳಿದಿದೆ.
ಮೈಸೂರಿನಲ್ಲಿ ಕೊರೊನಾ ಸೋಂಕಿತ ಗುಣಮುಖ: ಇಂದೇ ಡಿಸ್ಚಾರ್ಚ್ - ಕೊರೊನಾ ವೈರಸ್ ಅಪ್ಡೇಟ್
ಕೊರೊನಾ ವೈರಸ್ ರೋಗಿ ಸಂಪೂರ್ಣವಾಗಿ ಗುಣಮುಖನಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ನಿಯಮದಂತೆ ಬಿಡುಗಡೆ ಮಾಡಲಾಗಿದೆ.
ಕೊರೊನಾದಿಂದ ಗುಣಮುಖ
ಮೈಸೂರಿನ ನಿವಾಸಿಯಾದ ಈತ ದುಬೈನಿಂದ ಆಗಮಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಬಳಿಕ ಅಲ್ಲಿಂದ ಟ್ಯಾಕ್ಸಿ ಮೂಲಕ ಮನೆಗೆ ಹೋಗದೆ ನೇರವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು.