ಕರ್ನಾಟಕ

karnataka

ETV Bharat / city

ಬಾಲಕಿಯರ ಮೇಲೆ ಅತ್ಯಾಚಾರ: ಮೈಸೂರಲ್ಲಿ ಇಬ್ಬರು ಕಾಮುಕರು ಅರೆಸ್ಟ್​ - ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ

ಆಟವಾಡುತ್ತಿದ್ದ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮುಕರನ್ನು ಮೈಸೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ

By

Published : Apr 1, 2019, 7:28 PM IST

ಮೈಸೂರು: ೧೦ ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮುಕರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಎನ್.ಆರ್. ಮೊಹಲ್ಲಾದ ಜೈ ಶಿವಮಾದೇವ(53) ಹಾಗೂ ಖೈಸರ್(30) ಬಂಧಿತರು.

ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಘಟನೆ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರಿಗೆ ಪಕ್ಕದ ಮನೆಯ ಜೈ ಶಿವಮಾದೇವ ಚಾಕ್​ಲೇಟ್ ಕೊಡಿಸುವ ನೆಪವೊಡ್ಡಿ ಪಾರ್ಕ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಇದನ್ನು ನೋಡಿದ ಖೈಸರ್ ಜೈ ಶಿವಮಾದೇವನನ್ನು ಬೆದರಿಸಿ‌ ಕಳುಹಿಸಿದ್ದ. ಆದರೆ ನಂತರ ಬಾಲಕಿಯರಿಗೆ ಬ್ಲಾಕ್​ಮೇಲ್ ಮಾಡಿ ಖೈಸರ್ ಕೂಡ ಅತ್ಯಾಚಾರವೆಸಗಿದ್ದಾನೆ ಎನ್ನಲಾಗ್ತಿದೆ.

ಆಟವಾಡುತ್ತಿದ್ದ ಮಕ್ಕಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು, ಪಾಕ್೯ನಲ್ಲಿ ಅಳುತ್ತ ನಿಂತಿದ್ದ ಇಬ್ಬರು ಬಾಲಕಿಯರನ್ನು ಮನೆಗೆ ಕರೆತಂದು ವಿಚಾರಿಸಿದಾಗ ಕಾಮುಕರ ಕ್ರೌರ್ಯತೆಯನ್ನು ಅವರು ಬಿಚ್ಚಿಟ್ಟಿದ್ದಾರೆ. ಪೋಷಕರು ಕೂಡಲೇ ಠಾಣೆಗೆ ತೆರಳಿ‌‌ ದೂರು ನೀಡಿದ್ದಾರೆ.

ಅತ್ಯಾಚಾರಿಗಳನ್ನ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಎನ್.ಆರ್. ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details