ಮೈಸೂರು:ನಟಿ ರಮ್ಯಾ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ. ಇದು ಅಶಿಸ್ತನ್ನ ತೋರಿಸುತ್ತದೆ ಅವರನ್ನ ಕರೆದು ವಿವರಣೆ ಕೇಳುತ್ತೇವೆ. ಟ್ವಿಟರ್ ವಿಚಾರ ಕಾಂಗ್ರೆಸ್ ಆಂತರಿಕ ವಿಚಾರ ಪಕ್ಷದ ಚೌಕಟ್ಟಿನಲ್ಲಿ ವಿವರಣೆ ಪಡೆದು ಬಗೆಹರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ, ರಮ್ಯಾ ಅಶಿಸ್ತು ತೋರಿದ್ದಾರೆ: ಆರ್. ಧ್ರುವ ನಾರಾಯಣ್ - ರಮ್ಯ ಪಕ್ಷಕ್ಕೆ ಅಶಿಸ್ತು ತೋರಿಸಿದ್ದಾರೆ
ರಮ್ಯ ಅವರು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ. ಸಂಸದರಾಗಿ ಇದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದು ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬೇಕು. ಪಕ್ಷದ ಚೌಕಟ್ಟನ್ನು ಮೀರಬಾರದು ಎಂದು ಧ್ರುವ ನಾರಾಯಣ್ ಹೇಳಿದ್ದಾರೆ.
ಪತ್ರಕರ್ತರ ಸಂಘದ ಅವರಣದ್ಲಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿ ಅಲ್ಲ ಇದು ಅಶಿಸ್ತನ್ನು ತೋರಿಸುತ್ತದೆ ಅವರನ್ನು ಕರೆದು ವಿವರಣೆ ಕೇಳುತ್ತೇವೆ. ಸಂಸದರಾಗಿ ಇದ್ದವರು ಈ ರೀತಿ ಬಹಿರಂಗವಾಗಿ ಟ್ವೀಟ್ ಮಾಡಬಾರದು ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು ರಾಜ್ಯದ ಉಸ್ತುವಾರಿಗಳ ಗಮನಕ್ಕೆ ತರಬೇಕು. ಪಕ್ಷದ ಚೌಕಟ್ಟನ್ನು ಮೀರಬಾರದು. ನಾನಾಗಲಿ ಅಥವಾ ನಾಲಪಾಡ್ ಆಗಲಿ ಪಕ್ಷದ ವಿರುದ್ಧ ನಡೆದರೆ ಅದು ಅಶಿಸ್ತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಎಂಬಿಪಾ-ಡಿಕೆಶಿ ಇಬ್ಬರೂ ಸಿದ್ದರಾಮಯ್ಯ ಸಮ್ಮುಖದಲ್ಲಿ ಪರಸ್ಪರ ಆತ್ಮೀಯ ಮಾತುಕತೆ
TAGGED:
ramya tweet issue