ಮೈಸೂರು:ಹುಣಸೂರು ತಾಲೂಕಿನ ರಾಮಪಟ್ಟಣ ಗ್ರಾಮಸ್ಥರು ಚಿರತೆ ದಾಳಿಯಿಂದ ಕಂಗಾಲಾಗಿದ್ದು, ಸಂಜೆ 7 ಗಂಟೆಯಾದರೆ ಸಾಕು ಪ್ರಾಣ ಭಯದಿಂದ ಬದುಕುವಂತಾಗಿದೆ.
ರಾಮಪಟ್ಟಣ ಗ್ರಾಮಸ್ಥರಿಗೆ ಚಿರತೆ ಕಾಟ; ಸಂಜೆಯಾಗುತ್ತಲೇ ಆತಂಕ - ಮೈಸೂರು ರಾಮಪಟ್ಟಣ ಚಿರತೆ ಕಾಟ
ಗ್ರಾಮದಲ್ಲಿನ ನಾಯಿ, ಕೋಳಿ, ಕರು, ಮೇಕೆ, ಕುರಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದೆ. ಬೆಳಿಗ್ಗೆ ಯಾರ ಕಣ್ಣಿಗೂ ಕಾಣಿಸಿಕೊಳ್ಳದ ಚಿರತೆ, ಸಂಜೆಯಾಗುತ್ತಿದ್ದಂತೆ ತನ್ನ ಕಾರ್ಯಾಚರಣೆ ಶುರು ಮಾಡುತ್ತಿದೆ.
ಚಿರತೆ ಕಾಟ
ಇದನ್ನೂ ಓದಿ: ಸಿ.ಪಿ.ಯೋಗೇಶ್ವರ್ 'ಆಪರೇಷನ್ ಕಮಲ' ಮಾಡಲು ಶ್ರಮ ವಹಿಸಿದ್ದಾರೆ: ಎಂಟಿಬಿ ನಾಗರಾಜ್
ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಒಂದು ತಿಂಗಳ ಹಿಂದೆಯೇ ಬೋನು ಇಡಲಾಗಿದೆ. ಆದರೆ ಚಾಲಾಕಿ ಚಿರತೆ ಮಾತ್ರ ಬೋನಿಗೆ ಬಿದ್ದಿಲ್ಲ.