ಕರ್ನಾಟಕ

karnataka

ETV Bharat / city

ಬಿಸಿಲಿಗೆ ಕಾದು ಕೆಂಡವಾಗಿದ್ದ ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ - kannada news

ಕಳೆದ ಎರಡು ತಿಂಗಳುಗಳಿಂದ ಬಿಸಿಲಿಗೆ ತತ್ತರಿಸಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ವರುಣ ಕೊಂಚ ರಿಲೀಫ್​ ನೀಡಿದ್ದಾನೆ.

ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ

By

Published : Apr 9, 2019, 11:39 AM IST

ಮೈಸೂರು: ಬೇಸಿಗೆ ಬೇಗೆಯಿಂದ ಬಳಲಿ ಕಾದ ಕಬ್ಬಿಣದಂತಾಗಿದ್ದ ಸಾಂಸ್ಕೃತಿಕ ನಗರಿಗೆ ಮಳೆರಾಯನ ಆಗಮನದಿಂದ ಕೂಲ್ ಆಗಿದೆ.

ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ

ಕಳೆದ ಎರಡು ತಿಂಗಳಿನಿಂದ ಬೇಸಿಗೆ ಬಿಸಿಲಿಗೆ ಭೂಮಿ ಮಾತ್ರವಲ್ಲ, ಜನರು ಹಾಗೂ ಜಾನುವಾರು, ಕಾಡು ಪ್ರಾಣಿಗಳು ಬಳಲಿ ನೀರಿಗಾಗಿ ಹಾಹಾಕರ ಅನುಭವಿಸುವಂತಾಗಿದೆ. ಭೂಮಿ ಯಾವಾಗ ತಂಪಾಗುತ್ತಪ್ಪ ಅಂದುಕೊಂಡವರಿಗೆ ಮಳೆ ತಂಪೆರೆದಿದೆ. ಹಲವು ಕಡೆ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದವರೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ವರುಣದೇವ ಕೃಪೆ ತೋರಿದ್ದು, ಯುಗಾದಿಯ ವರ್ಷಾರಂಭದಲ್ಲಿಯೇ ಮಳೆ ಬರುತ್ತಿರುವುದು ಮುಂಗಾರಿಗೆ ಶುಭ ಸೂಚನೆ ನೀಡಿದೆ ಅಂತಿದ್ದಾರೆ ರೈತರು.

ABOUT THE AUTHOR

...view details