ಕರ್ನಾಟಕ

karnataka

ETV Bharat / city

ರಾಣಿ ಪ್ರಮೋದಾ ದೇವಿ ಒಡೆಯರ್​​ ಭೇಟಿ ಮಾಡಿದ ನಟಿ ರಾಗಿಣಿ ದ್ವಿವೇದಿ.. - Rani Pramoda Devi Wadiyar

ವೈಯಕ್ತಿಕ ಕೆಲಸಕ್ಕಾಗಿ ಮೈಸೂರಿಗೆ ಭೇಟಿ ನೀಡಿದ್ದ ನಟಿ ರಾಗಿಣಿ ಮೈಸೂರಿನ ರಾಜ ಮನೆತನದ ರಾಣಿ ಪ್ರಮೋದಾದೇವಿ ಒಡೆಯರ್ ಅವರನ್ನೂ ಭೇಟಿ ಮಾಡಿ ಅವರೊಂದಿಗೆ ಸ್ವಲ್ಪ ಸಮಯ ಚರ್ಚೆ ನಡೆಸಿದ್ದಾರೆ. ಶರಣ್ ಜೊತೆ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ರಾಗಿಣಿ ದ್ವಿವೇದಿ

By

Published : Aug 24, 2019, 1:25 PM IST

ಸದಾ ಹಸನ್ಮುಖಿ, ಗ್ಲಾಮರಸ್ ಬೊಂಬೆ ರಾಗಿಣಿ ದ್ವಿವೇದಿ ಮೂಲತ: ಬಂಗಾಳಿಯಾದರೂ ಕರ್ನಾಟಕದ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಯಾವ ಸಿನಿಮಾಗಳು ಹೆಸರು ಮಾಡದಿದ್ದರೂ ರಾಗಿಣಿ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ.

ನಟಿ ರಾಗಿಣಿ ದ್ವಿವೇದಿ

ಇತ್ತೀಚೆಗೆ ರಾಗಿಣಿ ರಾಣಿ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಗೆ ನಿಖರ ಕಾರಣ ತಿಳಿದುಬಂದಿಲ್ಲ. ‘ದಿ ಟೆರರ್ರಿಸ್ಟ್‘ ಬಿಟ್ಟರೆ ಸದ್ಯಕ್ಕೆ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ಇತ್ತೀಚಿಗೆ ಕೆಪಿಎಲ್​​ ಪಂದ್ಯ ನೋಡಲು ಬಂದಾಗ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದರು. 'ನಮ್ಮ ಹೀರೋಸ್ 2019' ಪ್ರಶಸ್ತಿ ಸಮಾರಂಭದಲ್ಲಿ ಕೂಡಾ ಅವರು ಪಾಲ್ಗೊಂಡಿದ್ದರು. ಅಲ್ಲದೆ ಇತ್ತೀಚೆಗೆ ಹೆರಿಟೇಜ್ ಡೈಮಂಡ್ ಜ್ಯೂವೆಲರಿ ಶಾಪ್ ಉದ್ಘಾಟನೆ ಮಾಡಿದ್ದ ರಾಗಿಣಿ ನಿನ್ನೆ ವೈಯಕ್ತಿಕ ಕಾರ್ಯಕ್ರಮಕ್ಕೆ ಮೈಸೂರಿಗೆ ಹೋದ ಸಂದರ್ಭದಲ್ಲಿ ರಾಜ ಮನೆತನದ ಶ್ರೀಮತಿ ಪ್ರಮೋದಾ ದೇವಿ ಅವರನ್ನು ಭೇಟಿ ಮಾಡಿದ್ಧಾರೆ. ಅವರೊಂದಿಗೆ ಚಹಾ ಸೇವಿಸಿ ಸ್ವಲ್ಪ ಹೊತ್ತು ಚರ್ಚೆ ನಡೆಸಿದ್ದಾರೆ. ರಾಗಿಣಿ, ಶರಣ್ ಜೊತೆ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾದಲ್ಲೂ ನಟಿಸಿದ್ದು ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರೇಮ್ ನಟನೆಯ 'ಗಾಂಧಿಗಿರಿ' ಚಿತ್ರದಲ್ಲೂ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನೇ ನೆಕ್ಸ್ಟ್​​ ಸಿಎಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ರಾಣಿ ಪ್ರಮೋದಾದೇವಿ ಒಡೆಯರ್ ಜೊತೆ ನಟಿ ರಾಗಿಣಿ ದ್ವಿವೇದಿ..

ABOUT THE AUTHOR

...view details