ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗಂಡ - ಹೆಂಡತಿ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ತಾಲೂಕಿನ ಹೊಸ ಕಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗಂಡ - ಹೆಂಡತಿ ನಡುವೆ ಜಗಳ.. ಕೊಲೆಯಲ್ಲಿ ಅಂತ್ಯ - ಮೈಸೂರು ಸುದ್ದಿ
ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ತಾಲೂಕಿನ ಹೊಸ ಕಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡ್ತಿ ನಡುವೆ ಜಗಳ..ಕೊಲೆಯಲ್ಲಿ ಅಂತ್ಯ
ಗ್ರಾಮದ ಮಮತಾ (30) ಮೃತ ಮಹಿಳೆ. ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಮಮತಾ ಹಾಗೂ ಪತಿ ನಾಗೇಶ್ ನಡುವೆ ಆರಂಭವಾದ ಗಲಾಟೆ ತಾರಕ್ಕೇರಿದ್ದು, ಅಕ್ಕಪಕ್ಕದವರು ಇಬ್ಬರನ್ನು ಸಮಾಧಾನ ಪಡಿಸಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ನಾಗೇಶ್, ತಡರಾತ್ರಿ ಪತ್ನಿ ಮಲಗಿದ್ದಾಗ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಪೊಲೀಸರಿಗೆ ಶರಣಾಗಿದ್ದಾನೆ. ಇಬ್ಬರ ಗಲಾಟೆಯಿಂದ 5 ವರ್ಷದ ಮಗ ತಬ್ಬಲಿಯಾಗಿದ್ದಾನೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಮತಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.