ಮೈಸೂರು: 'ಯುವರತ್ನ' ಸಿನಿಮಾ ಪ್ರಚಾರಕ್ಕಾಗಿ ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೈಸೂರಿಗೆ ಆಗಮಿಸಿದ್ದು, ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ನಟ ಪುನೀತ್ ರಾಜ್‍ಕುಮಾರ್, ಡಾಲಿ ಧನಂಜಯ್ ಹಾಗೂ ಚಿತ್ರತಂಡ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರಕ್ಕೆ ಆಗಮಿಸಿದ ಚಿತ್ರ ತಂಡಕ್ಕೆ, ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ನಂತರ ವೇದಿಕೆಗೆ ಆಗಮಿಸಿದ ಪುನೀತ್ ಹಾಗೂ ಧನಂಜಯ್ ಯುವರತ್ನ ಸಿನಿಮಾ ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.