ಮೈಸೂರು:ಕೊಳಚೆ ನಿರ್ಮೂಲನ ಮಂಡಳಿ ಹಾಗೂ ಆಶ್ರಯ ಯೋಜನೆಯಿಂದ ಕಟ್ಟಬೇಕಿದ್ದ ಮನೆಗಳ ಕಾಮಗಾರಿಯನ್ನ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ತಡೆಹಿಡಿದಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಆಶ್ರಯ ಮನೆ ಕಟ್ಟಲು ತಡೆವೊಡ್ಡಿದ ಆರೋಪ: ಶಾಸಕ ಎಸ್.ಎ. ರಾಮದಾಸ್ ವಿರುದ್ಧ ಪ್ರತಿಭಟನೆ - ಮೈಸೂರು ಸುದ್ದಿ
ಮೈಸೂರು ಕೊಳಚೆ ನಿರ್ಮೂಲನ ಮಂಡಳಿ ಹಾಗೂ ಆಶ್ರಯ ಯೋಜನೆಯಿಂದ ಕಟ್ಟಬೇಕಿದ್ದ ಮನೆಗಳ ಕಾಮಗಾರಿಯನ್ನ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ತಡೆಹಿಡಿದಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊಳಚೆ ನಿರ್ಮೂಲನ ಮಂಡಳಿಯಿಂದ ಮಳಲವಾಡಿಯಲ್ಲಿ 3.5 ಹಾಗೂ ವಿಶ್ವೇಶ್ವರ ನಗರದಲ್ಲಿ 1.5 ಎಕರೆ ಪ್ರದೇಶದಲ್ಲಿ 2,212 ಮನೆಗಳು, ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್ನಲ್ಲಿ ಲಿಲತಾದ್ರಿಪುರದಲ್ಲಿ 1140, ಗೂರೂರುನಲ್ಲಿ 1,644 ಮನೆಗಳನ್ನು ತಡೆಹಿಡಿದಿದ್ದಾರೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ರಾಮದಾಸ್ ಅವರು ಕೂಡ ಕಷ್ಟದಿಂದ ಮೇಲೆ ಬಂದವರು. ಇದನ್ನು ಮರೆಯದೇ, ಜನ ಪರವಾಗಿ ಹೋರಾಟ ಮಾಡಬೇಕು. ಆದರೆ,ಅವರು ಇದನ್ನು ಮರೆತು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.