ಮೈಸೂರು:ನಗರದ ಖಾಸಗಿ ಹೋಟೆಲ್ವೊಂದರ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಎರಡು ಹಾವುಗಳನ್ನು ಉರಗತಜ್ಞ ಸೂರ್ಯಕೀರ್ತಿ ರಕ್ಷಣೆ ಮಾಡಿದ್ದಾರೆ.
ಮೈಸೂರು: ಹೋಟೆಲ್ ಸಂಪ್ನಲ್ಲಿ ಬಿದ್ದಿದ್ದ ಎರಡು ಹಾವುಗಳ ರಕ್ಷಣೆ - ಉರಗತಜ್ಞ ಸೂರ್ಯಕೀರ್ತಿ
ಮೈಸೂರು ನಗರದ ಖಾಸಗಿ ಹೋಟೆಲ್ವೊಂದರ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಎರಡು ಹಾವುಗಳನ್ನು ಉರಗ ತಜ್ಞ ಸೂರ್ಯಕೀರ್ತಿ ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದಾರೆ.
ಮೈಸೂರು: ಹೋಟೆಲ್ವೊಂದರ ಸಂಪ್ನಲ್ಲಿ ಬಿದ್ದಿದ್ದ ಎರಡು ಹಾವುಗಳ ರಕ್ಷಣೆ
ಹೋಟೆಲ್ ಸಿಬ್ಬಂದಿ ಸಂಪ್ನಲ್ಲಿ ಉಳಿದಿರುವ ನೀರಿನ ಪ್ರಮಾಣವನ್ನು ಪರೀಕ್ಷಿಸಲು ಹೋದಾಗ ನೀರಿನ ತೊಟ್ಟಿಯೊಳಗೆ ಹಾವುಗಳು ಬಿದ್ದಿರುವುದು ತಿಳಿದುಬಂದಿದೆ. ತಕ್ಷಣ ಹೋಟೆಲ್ ಮಾಲೀಕ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಮಿಸಿದ ಉರಗತಜ್ಞ ಸೂರ್ಯಕೀರ್ತಿ, ತೊಟ್ಟಿಯೊಳಗೆ ಇಳಿದು ಹಾವುಗಳನ್ನು ರಕ್ಷಿಸಿದ್ದಾರೆ.
ಈ ಎರಡು ಹಾವುಗಳು ವಿಷ ರಹಿತ ಹಾವುಗಳಾಗಿದ್ದು, ಈ ಅಪರೂಪ ಪ್ರಭೇದಗಳು ಹೆಚ್ಚಾಗಿ ಕೊಡಗು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡುಬರುತ್ತದೆ.