ಮೈಸೂರು: ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸದಾಗಿ ಕಾರಾಗೃಹಗಳನ್ನು ಆರಂಭಿಸುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ಕಾರಾಗೃಹ: ಎಂ.ಬಿ ಪಾಟೀಲ್
ಬೆಂಗಳೂರು, ಮಂಗಳೂರು, ವಿಜಯಪುರ, ಬೀದರ್, ಹಾಸನ ಜಿಲ್ಲೆಗಳಲ್ಲಿ ಹೊಸದಾಗಿ ಕಾರಾಗೃಹಗಳನ್ನು ಆರಂಭಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ವತಿಯಿಂದ ಕಾರಾಗೃಹ ಮೈದಾನದಲ್ಲಿ ಏರ್ಪಡಿಸಿದ್ದ 52 ನೇ ಪ್ರಶಿಕ್ಷಣಾರ್ಥಿಗಳ ತಂಡದ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು. ಬೆಂಗಳೂರಿನಲ್ಲಿ 125 ಕೋಟಿ ರೂ., ಮಂಗಳೂರು, ವಿಜಯಪುರ, ಬೀದರ್ನಲ್ಲಿ ತಲಾ 100 ಕೋಟಿ ರೂ., ಹಾಸನ ಜಿಲ್ಲೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನೂತನ ಕಾರಾಗೃಹಗಳನ್ನು ಆರಂಭಿಸಲಾಗುವುದು ಎಂದರು.
ಇನ್ನು ಕಾರಾಗೃಹ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರಂತೆ ಸಮನಾಗಿ ಕಾಣುವ ವ್ಯವಸ್ಥೆ ರೂಪಿಸಲಾಗುವುದು. ಅಲ್ಲದೆ, ಆಡಳಿತದಲ್ಲೂ ಪಾರದರ್ಶಕತೆ ತರಲಾಗುವುದು ಎಂದು ಇದೇ ವೇಳೆ ಗೃಹ ಸಚಿವ ಮಾಹಿತಿ ನೀಡಿದರು.