ಮೈಸೂರು:ಮೈಸೂರು ಕಾನೂನು ವಿದ್ಯಾರ್ಥಿನಿಯ ಟ್ವಿಟರ್ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಪ್ರಜ್ಞಾ ಕಶ್ಯಪ್ ಫೇಸ್ಬುಕ್ ಹಾಗೂ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಪ್ರಜ್ಞಾ ಕಶ್ಯಪ್ ಎಬಿವಿಪಿ ಸಂಘಟನೆಯ ಕಾರ್ಯಕರ್ತರೂ ಆಗಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರು ನನ್ನನ್ನು ಟ್ವಿಟರ್ ಖಾತೆಯಲ್ಲಿ ಜನವರಿ 1 ರಿಂದ ಫಾಲೋ ಮಾಡುತ್ತಿದ್ದಾರೆ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ಖುಷಿ ಮತ್ತು ಗೌರವದ ವಿಷಯವಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.