ಕರ್ನಾಟಕ

karnataka

ETV Bharat / city

ಪ್ರವಾಸಿ ತಾಣ ಮುಚ್ಚುವಂತೆ ಸಾರ್ವಜನಿಕರಿಂದ ಒತ್ತಡ.. ಮೈಸೂರು ಜಿಲ್ಲಾಧಿಕಾರಿ - ಕೊರೊನಾ ವೈರಸ್​​ ಅಪ್​ಡೇಟ್​

ಲಾಕ್​​ಡೌನ್ ದಾಟಿ ಬಂದಿದ್ದೇವೆ‌. ಗಡಿ ಬಂದ್ ಮಾಡುವಂತೆ ಕೆಲವು ಕಡೆಯಿಂದ ಒತ್ತಡ ಕೇಳಿ ಬರುತ್ತಿದೆ. ಒಂದು ನಗರ ಅಥವಾ ಜಿಲ್ಲೆಯ ಗಡಿ ಬಂದ್​​ ಮಾಡಲು ಆಗುವುದಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ‌. ಬೇರೆ ಕಡೆಯಿಂದ ಬರುವವರನ್ನು ಪರೀಕ್ಷೆ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ತಿಳಿಸಿದರು..

District Collector Abhiram G. Shankar
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

By

Published : Jul 6, 2020, 3:47 PM IST

ಮೈಸೂರು:ಚಾಮರಾಜನಗರ ಜಿಲ್ಲೆಯಂತೆ ಮೈಸೂರಿನಲ್ಲೂ ಪ್ರವಾಸಿ ತಾಣಗಳನ್ನು ಮುಚ್ಚಬೇಕು. ಈ ಮೂಲಕ ಕೊರೊನಾ ಹರಡುವುದನ್ನು ತಡೆಯುವಂತೆ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದರು.

ಬಾಬು ಜಗಜೀವನ ರಾಮ್​​ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ರೆಸಾರ್ಟ್​​​​​ಗೆ ಬಂದು ಪ್ರವಾಸಿ ತಾಣಗಳಿಗೆ ಹೋಗುತ್ತಾರೆ. ಇದರ ಬಗ್ಗೆ ಎಚ್ಚರ ವಹಿಸಬೇಕಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಅದರ ಬಗ್ಗೆ ಗಂಭೀರವಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಲಾಕ್​​ಡೌನ್ ದಾಟಿ ಬಂದಿದ್ದೇವೆ‌. ಗಡಿ ಬಂದ್ ಮಾಡುವಂತೆ ಕೆಲವು ಕಡೆಯಿಂದ ಒತ್ತಡ ಕೇಳಿ ಬರುತ್ತಿದೆ. ಒಂದು ನಗರ ಅಥವಾ ಜಿಲ್ಲೆಯ ಗಡಿ ಬಂದ್​​ ಮಾಡಲು ಆಗುವುದಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ‌. ಬೇರೆ ಕಡೆಯಿಂದ ಬರುವವರನ್ನು ಪರೀಕ್ಷೆ ಮಾಡುವಂತೆ ಒತ್ತಡ ಕೇಳಿ ಬರುತ್ತಿದೆ ಎಂದು ತಿಳಿಸಿದರು. ಹೊರಗಿನಿಂದ ಬರುವ ಎಲ್ಲರನ್ನು ಟೆಸ್ಟಿಂಗ್ ಮಾಡಲು ಆಗುವುದಿಲ್ಲ. ಆ ರೀತಿ ಮಾಡಲು ಹೋದರೆ ಎಲ್ಲಾ ಕಡೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಒಂದು ನಿಮಿಷಕ್ಕೆ ಸಾವಿರಾರು ವಾಹನಗಳು ಬರುತ್ತದೆ. ಆದ್ದರಿಂದ ಇದು ಆಗುವ ಕೆಲಸವಲ್ಲ ಎಂದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್

ಬೆಂಗಳೂರಿನಿಂದ ಮೈಸೂರಿಗೆ ಸಾವಿರಾರು ಜನರು ಓಡಾಡುತ್ತಾರೆ‌. ವೈದ್ಯರು ತಿಳಿಸಿದವರಿಗೆ, ಅವಶ್ಯಕತೆ ಇರುವವರಿಗೆ ಮಾತ್ರ ಆರೈಕೆ ಮಾಡಲಾಗುವುದು. ಜನರು ಇನ್ನೂ ಎಚ್ಚೆತ್ತುಕೊಳ್ಳಬೇಕು. ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಹೆಚ್ಚುತ್ತಿದೆ ಎಂದು ಕಚೇರಿಗಳನ್ನು ಬಂದ್ ಮಾಡಲು ಆಗಲ್ಲ ಎಂದರು.

ಈಗ ಎಲ್ಲಾ ಕಡೆ ಒಂದಲ್ಲಾ ಒಂದು ಕೆಲಸಕ್ಕೆ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಮಯ. ನಾವು ಅವರನ್ನ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ. ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ ಎಂದು ತಿಳಿ ಹೇಳಿದರು.

ABOUT THE AUTHOR

...view details