ಮೈಸೂರು: ಅದ್ಧೂರಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 9 ದಿನಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಜನರನ್ನು ತಲುಪಿವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದರು.
ಸೆ. 26 ರಂದು ಚಾಮುಂಡಿ ಬೆಟ್ಟದಲ್ಲಿ ರಾಷ್ಟ್ರಪತಿಗಳಿಂದ ಉದ್ಘಾಟನೆಯಾದ ನಾಡಹಬ್ಬ ದಸರಾ ನಾಳೆ ಜಂಬೂ ಸವಾರಿಯೊಂದಿಗೆ ಸಂಪನ್ನವಾಗಲಿದೆ. ನಾಳಿನ ಅದ್ಧೂರಿ ಜಂಬೂ ಸವಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿಯ ಜಂಬೂ ಸವಾರಿಯಲ್ಲಿ 47 ಸ್ತಬ್ಧ ಚಿತ್ರಗಳು ಹಾಗೂ ಕಲಾ ತಂಡಗಳು ಭಾಗವಹಿಸಲಿವೆ. ಪೊಲೀಸ್ ಕಮಿಷನರ್ ಭದ್ರತೆ ಹಾಗೂ ಮೆರವಣಿಗೆ ಉಸ್ತುವಾರಿ ವಹಿಸಲಿದ್ದಾರೆ. ಕಾರ್ಪೊರೇಷನ್ ಕಮಿಷನರ್ ದಸರಾ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಸ್ವಚ್ಛತೆ ನೋಡಿಕೊಳ್ಳಲಿದ್ದಾರೆ.