ಮೈಸೂರು: ಮೈಸೂರಿನಿಂದ ವಿಮಾನಯಾನ ಆರಂಭ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಕೇಳಿದ್ದಾರೆ.
ಮೈಸೂರಿನಿಂದ ವಿಮಾನ ಸೇವೆ ಆರಂಭಿಸುವ ಕುರಿತು ಜನಾಭಿಪ್ರಾಯ ಸಂಗ್ರಹ: ಪ್ರತಾಪ್ ಸಿಂಹ
ಇದೇ ತಿಂಗಳ 25 ರಿಂದ ದೇಶಾದ್ಯಂತ ವಿಮಾನಯಾನ ಸೇವೆಯನ್ನು ಆರಂಭಿಸಿಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಾಗಾಗಿ ಈ ಕುರಿತು ಮೈಸೂರಿನಿಂದ ಬೇರೆ ರಾಜ್ಯಕ್ಕೆ ವಿಮಾನ ಸೇವೆಗಳನ್ನು ಆರಂಭ ಮಾಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಇದೇ ತಿಂಗಳ 25 ರಿಂದ ದೇಶಾದ್ಯಂತ ವಿಮಾನಯಾನ ಸೇವೆಯನ್ನು ಆರಂಭಿಸಿಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹಾಗಾಗಿ ಈ ಕುರಿತು ಮೈಸೂರಿನಿಂದ ಬೇರೆ ರಾಜ್ಯಕ್ಕೆ ವಿಮಾನ ಸೇವೆಗಳನ್ನು ಆರಂಭ ಮಾಡಬೇಕೋ ಅಥವಾ ಬೇಡವೋ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಮೈಸೂರು ವಿಮಾನ ನಿಲ್ದಾಣದಿಂದ ಅಲಯನ್ಸ್ ಏರ್ ವಿಮಾನಗಳು ಕೊಚ್ಚಿ, ಹೈದರಾಬಾದ್, ಚೆನ್ನೈ, ಗೋವಾ, ಬೆಂಗಳೂರು, ಕಲಬುರಗಿಗೆ ಹಾರಾಟ ನಡೆಸಬೇಕೇ ಎಂದು ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ಇನ್ನು ಹೊರ ರಾಜ್ಯಕ್ಕೆ ವಿಮಾನಯಾನ ಬೇಡ, ಏಕೆಂದರೆ ಆ ಸಂದರ್ಭದಲ್ಲಿ ಹೊರ ರಾಜ್ಯಗಳಿಗೆ ಹಾಗೂ ಅಲ್ಲಿಂದ ಇಲ್ಲಿಗೆ ಪ್ರಯಾಣಿಕರು ಆಗಮಿಸಿದರೆ 14 ದಿನ ಕ್ವಾರಂಟೈನ್ ಮಾಡಲಾಗುವುದು, ಆದ್ದರಿಂದ ರಾಜ್ಯದೊಳಗೆ ಅಂದ್ರೆ ಮೈಸೂರು ಮತ್ತು ಕಲಬುರಗಿಗೆ ವಿಮಾನ ಸೇವೆ ಆರಂಭಿಸುವುದು ಖಚಿತ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಜನಾಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗುವುದೆಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.