ಕರ್ನಾಟಕ

karnataka

ETV Bharat / city

ಇನ್ಮುಂದೆ ನೈಜ ಇತಿಹಾಸವನ್ನು ಮಕ್ಕಳಿಗೆ ಹೇಳಲಾಗುತ್ತದೆ : ಸಚಿವ ಪ್ರಲ್ಹಾದ್ ಜೋಶಿ - ಕರ್ನಾಟಕ ಪಠ್ಯ ಪುಸ್ತಕ ವಿವಾದ

ಈ ಹಿಂದೆ ಎಡಪಂಥೀಯ ಪಠ್ಯಗಳು ಇತ್ತು. ಈಗ ಭಾರತೀಯ ಸಂಸ್ಕೃತಿಯ ನೈಜ ಇತಿಹಾಸ ಹೇಳಲು ನಾವು ಮುಂದಾಗಿದ್ದೇವೆ. ಇದರಲ್ಲಿ ಏನು ತಪ್ಪಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರಶ್ನಿಸಿದರು..

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

By

Published : May 30, 2022, 2:34 PM IST

ಮೈಸೂರು: ಈವರೆಗೆ ಲೆಫ್ಟಿಸ್ಟ್ ಇತಿಹಾಸ ಪಠ್ಯದಲ್ಲಿತ್ತು. ಇನ್ಮುಂದೆ ನೈಜ ಇತಿಹಾಸ ಮಕ್ಕಳಿಗೆ ಹೇಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಹೇಳಿದರು.

ರೋಹಿತ್ ಚಕ್ರತೀರ್ಥ ವಿರುದ್ಧ ನಿರ್ಮಲಾನಂದನಾಥ ಶ್ರೀಗಳ ಅಸಮಾಧಾನ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ವಿಚಾರ ಮುಗಿದ ಅಧ್ಯಾಯ. ನಾಡಗೀತೆ ವಿವಾದಕ್ಕೆ ಚಕ್ರತೀರ್ಥರೇ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಇದನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳುತ್ತಿದ್ದಾರೆ ಎಂದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಪ್ರತಿಕ್ರಿಯೆ ನೀಡಿರುವುದು..

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿರುವುದು ಸ್ವಾಗತಾರ್ಹ. ಅವರಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಯೋಗ ಮಾಡುವ ಸ್ಥಳದ ಮಾಹಿತಿ ಪಡೆಯಲಾಗುವುದು ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ:ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ : ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ತಿರುಗೇಟು

ABOUT THE AUTHOR

...view details