ಕರ್ನಾಟಕ

karnataka

ETV Bharat / city

ರಾಜಕಾರಣಿಗಳು ಜನರ ಕಾರ್ಯನಿಷ್ಠೆ ಹಾಳು ಮಾಡ್ತಿದ್ದಾರೆ: ಎಸ್.ಎಲ್ ಭೈರಪ್ಪ ಅಸಮಾಧಾನ

ಇಂದು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುವವರು ನಮ್ಮ ರಾಜಕಾರಣಿಗಳು ಎಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಾಹಿತಿ ಎಸ್.ಎಲ್.‌ಭೈರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.

ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ..ಎಸ್.ಎಲ್.ಭೈರಪ್ಪ ಅಸಮಾಧಾನ

By

Published : Sep 29, 2019, 3:03 PM IST

ಮೈಸೂರು:ಇಂದು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುವವರು ನಮ್ಮ ರಾಜಕಾರಣಿಗಳು ಎಂದು ದಸರಾ ಉದ್ಘಾಟನಾ ಭಾಷಣದಲ್ಲಿ ಸಾಹಿತಿ ಎಸ್.ಎಲ್.‌ಭೈರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ: ಎಸ್.ಎಲ್.ಭೈರಪ್ಪ

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು, ಲಿಂಗಾಯತ,‌‌ ವೀರಶೈವ ವಿಚಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಸಾಹಿತಿಗಳು ಭಾಗವಹಿಸಿದ್ದು ಸರಿಯಲ್ಲ. ಹಿಂದೆ ಬಸವಣ್ಣ ಜಾತಿ ನಾಶಕ್ಕೆ ಶ್ರಮಿಸಿದರು.‌ ಆದರೆ, ಇಂದು ಕೆಲವು ಜನ ಹಾಗೂ ನಮ್ಮ ರಾಜಕಾರಣಿಗಳು ಜನರ ಕಾರ್ಯನಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ನನಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ದೇವರಲ್ಲಿ ನಂಬಿಕೆ ಇಲ್ಲದವರು ಪ್ರಗತಿಪರರು ಎಂದು ತಿಳಿದಿರುತ್ತಾರೆ. ಆದರೆ ನಾನು ವಿದ್ಯಾರ್ಥಿಯಾಗಿದ್ದಾಗ ವಾರಕ್ಕೆ 1 ಬಾರಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಬಂದು ಪೂಜೆ ಸಲ್ಲಿಸುತ್ತಿದ್ದೆ. ನಂತರ ಈಗ ವರ್ಷಕ್ಕೆ1 ಬಾರಿ ಬರುತ್ತೇನೆ.‌ ದೇವರ ನಂಬಿಕೆ ಎಂಬುದು ಅವರವರಿಗೆ ಬಿಟ್ಟ ವಿಚಾರ.

ದೇವರಲ್ಲಿ ಶಕ್ತಿ ದೇವತೆಯಾದ ಹೆಣ್ಣಿಗೆ ವಿಶೇಷ ಸ್ಥಾನವಿದೆ ಎಂದರು. ಆದ್ದರಿಂದ ಗ್ರಾಮಗಳಲ್ಲಿ ಮೊದಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವುದು. ಇನ್ನೂ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯ ಪ್ರವೇಶದ ಬಗ್ಗೆ ಅಸಮಾಧಾನ ಇದೆ. ನಂಬಿಕೆಗಳಿಗೆ ನಾವು ಬೆಲೆ ಕೊಡಬೇಕು. ಅವರವರ ನಂಬಿಕೆಗ\ಳನ್ನ ಅವರಿಗೆ ಬಿಡಬೇಕು ಎಂದರು.

ABOUT THE AUTHOR

...view details