ಕರ್ನಾಟಕ

karnataka

ETV Bharat / city

ಹುಣಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ: ಇಬ್ಬರು ಅರೆಸ್ಟ್​

ಖಚಿತ ಮಾಹಿತಿ ಮೇರೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್​ ಮೇಲೆ ದಾಳಿ ಮಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

police-attack-prostitution-cross-in-hunsur
ಹುಣುಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡ ಮೇಲೆ ಪೋಲಿಸ್ ದಾಳಿ

By

Published : Apr 30, 2022, 3:32 PM IST

ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಿಲ್ಲೆಯ ಹುಣಸೂರಿನ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಹುಣಸೂರಿನ ಹೊರವಲಯದಲ್ಲಿರುವ ಲಾಡ್ಜ್​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಒಡನಾಡಿ ಸೇವಾ ಸಂಸ್ಥೆಯ ತಂಡದೊಂದಿಗೆ ಹುಣಸೂರು ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಒಡನಾಡಿ ಸೇವಾಸಂಸ್ಥೆಗೆ ಖಚಿತ ಮಾಹಿತಿ ತಿಳಿದಿತ್ತು. ನಂತರ ಎಸ್​ಪಿ ಚೇತನ್ ಅವರಿಗೆ ವಿಷಯವನ್ನು ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಡಿವೈಎಸ್ಪಿ ರವಿಕುಮಾರ್ ಅವರು ವಿಶೇಷ ತಂಡವೊಂದನ್ನು ರಚಿಸಿ, ಗುರುವಾರ ರಾತ್ರಿ ಏಕಕಾಲದಲ್ಲಿ ಮೂರು ಲಾಡ್ಜ್​​ಗಳ ಮೇಲೆ ದಾಳಿ ನಡೆಸಿ ದಂಧೆ ನಡೆಸುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಣಸೂರಿನ ಹೊರವಲಯದಲ್ಲಿ ಇಂತಹ ದಂಧೆಗಳು ಹೆಚ್ಚಾಗಿದ್ದು, ದೆಹಲಿ, ಕೋಲ್ಕತ್ತಾ ಹಾಗೂ ಮುಂಬೈನಂತಹ ನಗರಗಳೊಂದಿಗೆ ನಂಟು ಇದೆ ಎನ್ನಲಾಗ್ತಿದೆ.

ಮೈಸೂರಿನಲ್ಲಿ ಹಲವು ಹೆಣ್ಣುಮಕ್ಕಳಿಗೆ ಹಣದ ಆಮಿಷವೊಡ್ಡಿ ಸಾಗಾಣಿಕೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಹುಣಸೂರಿನ ಪೊಲೀಸರ ತಂಡದೊಂದಿಗೆ ಒಡನಾಡಿ ಸಂಸ್ಥೆಯ ನಿರ್ದೇಶಕರು ಹಾಗೂ ಸದಸ್ಯರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:ರೈಲಿನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ.. ವಿರೋಧಿಸಿದ್ದಕ್ಕೆ ಟ್ರೈನ್​​ನಿಂದ ಹೊರ ಎಸೆದ ಕಾಮುಕ!

For All Latest Updates

ABOUT THE AUTHOR

...view details