ಕರ್ನಾಟಕ

karnataka

ETV Bharat / city

ವಕೀಲೆ ಜೊತೆ ಇನ್ಸ್​ಪೆಕ್ಟರ್ ಅನುಚಿತ ವರ್ತನೆ... ಕೋರ್ಟ್ ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ - undefined

ಮೈಸೂರಿನ ಕುವೆಂಪು ನಗರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ವಕೀಲೆ, ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿದ್ದಾರೆ.

ಮಹಿಳಾ ವಕೀಲೆ ಜೊತೆ ಇನ್ಸ್​ಪೆಕ್ಟರ್ ಅನುಚಿತ ವರ್ತನೆ

By

Published : Jun 12, 2019, 5:44 AM IST

Updated : Jun 12, 2019, 8:56 AM IST

ಮೈಸೂರು:ಪ್ರಕರಣವೊಂದರ ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ಹೋದ ವಕೀಲೆ ಜೊತೆ, ಪೊಲೀಸ್ ಇನ್ಸ್​ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಕಲಾಪವನ್ನು ವಕೀಲರು ಬಹಿಷ್ಕರಿಸಿದ ಘಟನೆ ನಡೆದಿದೆ.

ವಕೀಲೆಯೊಬ್ಬರು ಪ್ರಕರಣವೊಂದರ ಮಾಹಿತಿ ಪಡೆಯಲುಕುವೆಂಪು ನಗರ ಠಾಣೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಠಾಣೆಯ ಇನ್ಸ್​ಪೆಕ್ಟರ್ ರಾಜು ಎಂಬವರು ಸರಿಯಾಗಿ ಮಾಹಿತಿ ನೀಡದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ, ವಕೀಲೆ ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿದ್ದಾರೆ.

ಈ ದೂರಿನ‌ ಅನ್ವಯ ಇನ್ಸ್​ಪೆಕ್ಟರ್ ಕ್ರಮವನ್ನು ಖಂಡಿಸಿ ನೆನ್ನೆ ಮೈಸೂರು ನ್ಯಾಯಾಲಯದ ಕಲಾಪವನ್ನು ವಕೀಲರು ಬಹಿಷ್ಕಾರಿಸಿ, ಇನ್ಸ್​ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Last Updated : Jun 12, 2019, 8:56 AM IST

For All Latest Updates

TAGGED:

ABOUT THE AUTHOR

...view details