ಮೈಸೂರು: ಮಾಸ್ಕ್ ಹಾಕಿಲ್ಲವೆಂದು ಕಾನ್ ಸ್ಟೇಬಲ್ ಓರ್ವ ಯುವಕನ ತಲೆಗೆ ರಕ್ತ ಬರುವಂತೆ ಹೊಡೆದಿರುವ ಘಟನೆ ನಗರದಲ್ಲಿ ನಡೆದಿದೆ.
ಮಾಸ್ಕ್ ಹಾಕಿಲ್ಲವೆಂಬುದೇ ಕಾರಣ, ರಕ್ತ ಬರುವಂತೆ ಯುವಕನಿಗೆ ಹೊಡೆದ ಪೊಲೀಸಪ್ಪ.. - ಆಕಷ್೯ ಎಂಬ ಯುವಕನಿಗೆ ಕಾನ್ ಸ್ಟೇಬಲ್ ಉಮೇಶ್
ಮೈಸೂರಿನ ಹೊರವಲಯದ ಬಸ್ತಿಪುರ ಚೆಕ್ ಪೋಸ್ಟ್ ಬಳಿ, ವಾಹನ ಹಾಗೂ ಮಾಸ್ಕ್ ತಪಾಸಣೆ ವೇಳೆ ಆಕಷ್೯ ಎಂಬ ಯುವಕನಿಗೆ ಕಾನ್ ಸ್ಟೇಬಲ್ ಉಮೇಶ್ ಲಾಠಿಯಿಂದ ತಲೆಗೆ ಹೊಡೆದಿದ್ದಾರೆ.ಇದರಿಂದ ಆತನ ತಲೆಯಲ್ಲಿ ರಕ್ತ ಸುರಿಯಲಾರಂಭಿಸಿದ್ದು, ಇದನ್ನು ನೋಡಿದ ಕರ್ತವ್ಯದಲ್ಲಿದ್ದ ಪೊಲೀಸರು, ಸಮಾಧಾನ ಮಾಡಲು ಹೋಗಿದ್ದಾರೆ.

ರಕ್ತ ಬರುವಂತೆ ಯುವಕನಿಗೆ ಹೊಡೆದ ಪೊಲೀಸಪ್ಪ
ರಕ್ತ ಬರುವಂತೆ ಯುವಕನಿಗೆ ಹೊಡೆದ ಪೊಲೀಸಪ್ಪ
ಮೈಸೂರಿನ ಹೊರವಲಯದ ಬಸ್ತಿಪುರ ಚೆಕ್ ಪೋಸ್ಟ್ ಬಳಿ, ವಾಹನ ಹಾಗೂ ಮಾಸ್ಕ್ ತಪಾಸಣೆ ವೇಳೆ ಆಕಷ್೯ ಎಂಬ ಯುವಕನಿಗೆ ಕಾನ್ ಸ್ಟೇಬಲ್ ಉಮೇಶ್ ಲಾಠಿಯಿಂದ ತಲೆಗೆ ಹೊಡೆದಿದ್ದಾರೆ.
ಇದರಿಂದ ಆತನ ತಲೆಯಲ್ಲಿ ರಕ್ತ ಸುರಿಯಲಾರಂಭಿಸಿದ್ದು, ಇದನ್ನು ನೋಡಿದ ಕರ್ತವ್ಯದಲ್ಲಿದ್ದ ಪೊಲೀಸರು, ಸಮಾಧಾನ ಮಾಡಲು ಹೋಗಿದ್ದಾರೆ.
ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಆಕರ್ಷ್, ನಂತರ ಹೆಬ್ಬಾಳ ಪೊಲೀಸ್ ಠಾಣೆಗೆ ವೈದ್ಯಕೀಯ ವರದಿ ವಿಡಿಯೋ ಜೊತೆ ತೆರಳಿದರು. ಆದರೆ, ಪ್ರಕರಣ ದಾಖಲಿಸದೆ ಪೊಲೀಸರು ಸತಾಯಿಸಿದ್ದಾರೆ. ಇದರ ವಿರುದ್ಧ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.