ಕರ್ನಾಟಕ

karnataka

ETV Bharat / city

ಮಸಾಜ್​ ಪಾರ್ಲರ್​ ಮೇಲೆ ಸಿಸಿಬಿ ಪೊಲೀಸರ ದಾಳಿ: ನೇಪಾಳಿ ಮಹಿಳೆಯ ರಕ್ಷಣೆ - ಮಸಾಜ್ ಪಾರ್ಲರ್

ಮೈಸೂರಿನ ಮಸಾಜ್ ಪಾರ್ಲರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಮಂಡಿ ಪೊಲೀಸ್ ಠಾಣೆ

By

Published : Feb 6, 2019, 2:13 PM IST

Updated : Feb 6, 2019, 3:26 PM IST

ಮೈಸೂರು: ಮಸಾಜ್ ಪಾರ್ಲರ್​ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ನೇಪಾಳಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಗರದ ಮಂಡಿ ಪ್ರದೇಶದಲ್ಲಿರುವ ರೆಡ್ ರೋಜ್ ಮಸಾಜ್ ಪಾರ್ಲರ್ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಶಿವರಾಜ್ ಹಾಗೂ ಮಹದೇವ ಎಂಬುವರನ್ನು ಬಂಧಿಸಿದ್ದು, ಒಬ್ಬ ನೇಪಾಳಿ ಮಹಿಳೆಯನ್ನು ರಕ್ಷಿಸಿದ್ದಾರೆ.

ಈ ದಾಳಿಯ ಸಂದರ್ಭದಲ್ಲಿ ನಗದು ಹಾಗೂ ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದು, ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 6, 2019, 3:26 PM IST

ABOUT THE AUTHOR

...view details