ಮೈಸೂರು:ಹತ್ತು ವರ್ಷದಿಂದ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರಿಂದ 32 ಕೆಜಿ ಗಾಂಜಾ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸಿದ್ದರಾಜು (60), ಇವರ ಮಗ ಮಂಜುನಾಥ್ (36) ಬಂಧಿತ ಆರೋಪಿಗಳು. ಆರೋಪಿ ಸಿದ್ದರಾಜು ಕೆಆರ್ಎಸ್ ರಸ್ತೆ ಬಳಿಯ ಪಿಕೆಟಿಬಿ ಆಸ್ಪತ್ರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅವರಿಂದ 5 ಕೆಜಿ, 450 ಗ್ರಾಂ. ಗಾಂಜಾ ಹಾಗೂ 1400 ನಗದನ್ನು ವಶಪಡಿಸಿಕೊಂಡಿದ್ದಾರೆ.