ಮೈಸೂರು: ಇಂದು ಬೆಳಗ್ಗೆ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದಾರೆ. ಇಂದು ನಗರದಲ್ಲಿ ಮಳೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೋಮವಾರವೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಲಾಖೆಯ ಮುನ್ಸೂಚನೆಯಂತೆಯೇ ನಗರದಲ್ಲಿ ಪರಿಶುದ್ಧ ವಾತಾವರಣ ಇದ್ದು ಯೋಗ ಕಾರ್ಯಕ್ರಮ ಸಾಂಗವಾಗಿ ನೆರವೇರುತ್ತಿದೆ.
ಐಎಂಡಿ ಪ್ರಕಾರ, ಜೂನ್ 1 ರಿಂದ 15 ರವರೆಗೆ ಅಧಿಕ ಮಳೆ ಬಿದ್ದ ಒಂಬತ್ತು ಜಿಲ್ಲೆಗಳಲ್ಲಿ ಮೈಸೂರು ಸೇರಿದೆ. ಆಯುಷ್ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 8ನೇ ಆವೃತ್ತಿಯ ಮುಖ್ಯ ಕಾರ್ಯಕ್ರಮವನ್ನು ಮೈಸೂರಿನ ಅರಮನೆಯಲ್ಲಿ ಆಚರಿಸಲಾಗುತ್ತಿದೆ.