ಮೈಸೂರು:ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿ ಹಣವನ್ನು ಜೇಬುಗಳ್ಳರು ಎಗರಿಸಿದ್ದಾರೆ.
ಗಜ ಪಯಣದಲ್ಲಿ ಮೈಸೂರು ಮಾಜಿ ಮೇಯರ್ ಜೇಬಿಗೆ ಬಿತ್ತು ಕತ್ತರಿ - ಜೇಬುಗಳ್ಳರ ಕರಾಮತ್ತು
ಸಚಿವ ಆರ್. ಅಶೋಕ್ ಜೊತೆ ಗಜ ಪಯಣಕ್ಕೆ ಬಂದಿದ್ದ ಮಾಜಿ ಮೇಯರ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ.
ಮಾಜಿ ಮೇಯರ್
ಇಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಹಳ್ಳಿ ಪ್ರದೇಶದಲ್ಲಿ ಮೊದಲ ತಂಡದ ಗಜಪಯಣವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜೇಬುಗಳ್ಳರು ಕೈಚಳಕ ತೋರಿಸಿದ್ದಾರೆ.
ಈ ವೇಳೆ ಗಜ ಪಡೆಗೆ ಪುಷ್ಪಾರ್ಚನೆ ಮಾಡುವಾಗ ಸಚಿವರೊಂದಿಗೆ ಮಾಧ್ಯಮಗಳ ಕ್ಯಾಮರಾಗೆ ಪೋಸ್ ಕೊಡುವಾಗ ಸಂದೇಶ್ ಸ್ವಾಮಿ ಅವರ ಪ್ಯಾಂಟ್ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಜೇಬುಗಳ್ಳರು ಎಗರಿಸಿದ್ದಾರೆ ಎಂದು ಸ್ವತಃ ಸಂದೇಶ್ ಸ್ವಾಮಿ ಈಟಿವಿ ಭಾರತ್ ಗೆ ತಿಳಿಸಿದ್ದಾರೆ.