ಕರ್ನಾಟಕ

karnataka

ETV Bharat / city

ಕೊಡಗು-ಮೈಸೂರಲ್ಲಿ ಶಾಂತಿಯುತ ಮತದಾನ: ಹಲವು ಗಣ್ಯರಿಂದ ಹಕ್ಕು ಚಲಾವಣೆ - undefined

ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದಲ್ಲಿ ಕೆಲವೊಂದು ಸಣ್ಣಪುಟ್ಟ ಅಹಿತಕರ ಘಟನೆಯನ್ನು ಬಿಟ್ಟರೆ, ಎಲ್ಲೆಡೆ ಶಾಂತಿಯುತ ಮತದಾನವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿಯೂ ಶಾಂತಿಯುತ ಮತದಾನವಾಗಿದ್ದು, ರಾಜಕೀಯ ನಾಯಕರು ಹಾಗೂ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದರು.

ಮೈಸೂರು-ಕೊಡಗಿನಲ್ಲಿ ಹಲವು ಗಣ್ಯರಿಂದ ಹಕ್ಕು ಚಲಾವಣೆ

By

Published : Apr 19, 2019, 5:21 AM IST

ಮೈಸೂರು: 2019ರ ಲೋಕಸಭಾ ಚುನಾವಣೆಯ ರಾಜ್ಯದ ಮೊದಲನೇ ಹಂತಕ್ಕೆ ನಡೆದ ಚುನಾವಣೆಯಲ್ಲಿ ಶೇ.68.14ರಷ್ಟು ಮತದಾನದೊಂದಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ. ಎಚ್. ವಿಜಯಶಂಕರ್, ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಸೇರಿದಂತೆ ಒಟ್ಟು 22 ಮಂದಿ ಕಣದಲ್ಲಿದ್ದಾರೆ. ಗುರುವಾರ ಬೆಳಿಗ್ಗೆ ಸರಾಗವಾಗಿ ಆರಂಭಗೊಂಡ ಮತದಾನ ಸಂಜೆ 6 ರವರೆಗೆ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿಯುತವಾಗಿ ನಡೆದಿದೆ.

ಮೈಸೂರು-ಕೊಡಗಿನಲ್ಲಿ ಹಲವು ಗಣ್ಯರಿಂದ ಹಕ್ಕು ಚಲಾವಣೆ

ಮಡಿಕೇರಿಯಲ್ಲಿ‌‌ ಶೇ. 75, ವಿರಾಜಪೇಟೆಯಲ್ಲಿ ಶೇ. 72.23, ಪಿರಿಯಾಪಟ್ಟಣ ಶೇ. 78.60, ಹುಣಸೂರು ಶೇ. 77.45, ಚಾಮುಂಡೇಶ್ವರಿ ಶೇ. 71.75, ಕೃಷ್ಣರಾಜ ಶೇ. 60.46, ಚಾಮರಾಜ ಶೇ. 56, ನರಸಿಂಹರಾಜ ಶೇ. 59.89 ಮತದಾನವಾಗಿದೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಸಿ. ಎಚ್. ವಿಜಯಶಂಕರ್, ಸಂಸದ ಪ್ರತಾಪಸಿಂಹ, ಶ್ರೀನಿವಾಸ್ ಪ್ರಸಾದ್​, ಡಾ. ಎಚ್. ಸಿ. ಮಹದೇವಪ್ಪ, ಎ. ಎಚ್. ವಿಶ್ವನಾಥ್, ಸಚಿವ ಜಿ. ಟಿ. ದೇವೇಗೌಡ, ರಾಣಿ ಪ್ರಮೋದಾದೇವಿ, ರಾಜ ಯದುವೀರ್​ ದಂಪತಿ, ಡಾ. ಯತೀಂದ್ರ, ಹರ್ಷವರ್ಧನ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಗಣ್ಯರು ಮತಚಲಾಯಿಸಿದರು.

For All Latest Updates

TAGGED:

ABOUT THE AUTHOR

...view details